ಪುತ್ತೂರು : ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿ ಉದ್ಘಾಟನೆ

ಪುತ್ತೂರು: ಉಪ ಬೆಳೆಯಾಗಿ ಅತಿ ಬೇಡಿಕೆ ಪಡೆಯುತ್ತಿರುವ ಕಡಿಮೆ ಜಾಗ, ಖರ್ಚು ಬಯಸುವ ಮೀನಿನ ಕೃಷಿಗೆ ಮುಂದಾಗಬೇಕು ಎಂದು ರಾಜ್ಯ ಬಂದರು ಮತ್ತು ಒಳನಾಡು ಮೀನುಗಾರಿಕಾ ಇಲಾಖೆ ಸಚಿವ ಎಸ್. ಅಂಗಾರ ಮನವಿ ಮಾಡಿದ್ದಾರೆ.
ಪುತ್ತೂರಿನಲ್ಲಿ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕುಗಳನ್ನೊಳಗೊಂಡ ಉಪವಿಭಾಗ ವ್ಯಾಪ್ತಿಯ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ತಾಲೂಕು ಪಂಚಾಯತ್ ಕಟ್ಟಡದಲ್ಲಿ ಅವರು ಉದ್ಘಾಟಿಸಿದರು.ಇಂದು ಒಳನಾಡು ಮೀನುಗಾರಿಕೆಗೆ ಸಂಬಂಧಿಸಿ ಅನೇಕ ಬದಲಾವಣೆಗಳಾಗಿವೆ. ಅಡಿಕೆ ಬೆಳೆಗೆ ಬೇಕಾಗುವಷ್ಟು ಭೂಮಿಯ ಅವಶ್ಯಕತೆ ಮೀನು ಸಾಕಾಣಿಕೆಗೆ ಇಲ್ಲ. ಕೇವಲ ಸ್ವಲ್ಪ ಜಾಗದಲ್ಲೇ, ಸಣ್ಣ ಕುಟುಂಬವೂ ಮೀನು ಸಾಕಾಣಿಕೆ ಮಾಡಿ ಉತ್ತಮ ಇಳುವರಿ ಪಡೆಯಲು ಸಾಧ್ಯ ಎಂದ ಅವರು ನೀರಿನ ವ್ಯವಸ್ಥೆ ಇರುವ ಕೃಷಿಕರು ಮೀನು ಸಾಕಾಣಿಕೆಗೆ ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಮಂಗಳೂರು ಜಂಟಿ ನಿರ್ದೇಶಕ ಹರೀಶ್ ಕುಮಾರ್, ಉಪನಿರ್ದೇಶಕಿ ಡಾ. ಸುಶ್ಮಿತಾ ರಾವ್, ಪುತ್ತೂರು ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ, ತಾ.ಪಂ. ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಸದಸ್ಯ ಹರೀಶ್ ಬಿಜತ್ರೆ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರು ಬೂಡಿಯಾರು ರಾಧಾಕೃಷ್ಣ ರೈ ಮೊದಲಾದವರು ಉಪಸ್ಥಿತರಿದ್ದರು.
