ಮಂಗಳೂರು: ಡಾ. ನರೇಶ್ವಂದ್ ಹೆಗ್ಡೆ ಪರ ನಟ ಅರವಿಂದ ಬೋಳಾರ್ ಅಬ್ಬರದ ಪ್ರಚಾರ

ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಸ್ಪರ್ಧಿಸುತ್ತಿದ್ದು, ಅವರ ಪರವಾಗಿ ನಟ ಅರವಿಂದ ಬೋಳಾರ್ ಅವರು ಎರಡನೇ ದಿನ ಕೂಡ ಪ್ರಚಾರದಲ್ಲಿ ತೊಡಗಿದರು.







ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು, ಅವರ ಪರವಾಗಿ ನಟ ಅರವಿಂದ ಬೋಳಾರ್ ಅವರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಮಂಗಳೂರಿನ ಕೆನರಾ ಹೈಸ್ಕೂಲ್, ಕೆನರಾ ಮೈನ್, ಬಿಇಎಮ್ ಸ್ಕೂಲ್, ಪೊಂಪೆ ಹೈಸ್ಕೂಲ್, ಎಸ್‌ಡಿಎಮ್ ಕಾಲೇಜು, ಬೆಸೆಂಟ್ ಕಾಲೇಜುಗಳಿಗೆ ಭೇಟಿ ನೀಡಿ ಅಬ್ಬರದ ಪ್ರಚಾರವನ್ನು ಮಾಡಿದರು.