ರಾಜೇಶ್ ಪವಿತ್ರನ್ ಬಂಧನ ರಾಜಕೀಯ ಷಡ್ಯಂತ್ರ

ಅಖಲ ಭಾರತ ಹಿಂದೂ ಮಹಾಸಭಾ ರಾಜ್ಯಾದ್ಯಕ್ಷ ರಾಜೇಶ್ ಪವಿತ್ರನ್ ಬಂಧನ ರಾಜಕೀಯ ಷಡ್ಯಂತ್ರ. ಇದರ ಹಿಂದಿರುವ ಕಾಣದ ಕೈಗಳನ್ನು ಬಂಧಿಸದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಆಗ್ರಹಿಸಿದ್ದಾರೆ. ಅವರು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹಿಂದೂ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಸುರೇಶ್ ರಾಜೇಶ್ ಜತೆ ಕೆಲಸಕ್ಕೆ ಸೇರಿದ್ದು. ಅವರ ಮೇಲೆ ಹಣ ದುರುಪಯೋಗ ಮತ್ತಿತರ ಆರೋಪ ಬಂದಾಗ ಕೆಲಸದಿಂದ ತೆಗೆಯಲಾಗಿತ್ತು. ಆಗ ಅವರು ಲ್ಯಾಪ್ ಟಾಪ್ ಬಿಟ್ಟು ಹೋಗಿದ್ದರು.
ಪೆÇಲೀಸ್ ಯಾವುದೇ ನೋಟಿಸ್, ಮನೆಯವರಿಗೆ ಮಾಹಿತಿ ಕೊಡದೆ ಅರೆಸ್ಟ್ ಮಾಡಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು, ಪ್ರಮುಖ ಉದ್ಯಮಿಯನ್ನು ನೋಟಿಸ್ ನೀಡದೆ ಅರೆಸ್ಟ್ ಹಿಂದೆ ಕಾಣದ ಕೈಗಳ ಕೈವಾಡ ಇದೆ ಎಂದು ಆರೋಪಿಸಿದರು.ಚುನಾವಣೆ ಹತ್ತಿರ ಬಂದಾಗ ದಮನ ಮಾಡಲು ರಾಜಕೀಯ ಪ್ರಯತ್ನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸುದ್ದಿಗೋಷ್ಟಿಯಲ್ಲಿ ರಾಜೇಶ್ ಪೂಜಾರಿ, ಹರ್ಷ ನಾಯಕ್ ಉಪಸ್ಥಿತಿ
