ಹೆಮ್ಮಾಡಿ ಸೇವಂತಿಗೆಗೆ ಸರಕುಗಳ ಭೌಗೋಳಿಕ ಮಾನ್ಯತೆ ದೊರಕಿಸಲು ತಳಿ ವೈಶಿಷ್ಟ್ಯ ತೆ ಅಧ್ಯಯನ ಕ್ರಮದ ಪರಿಶೀಲನೆ:ಶಾಸಕ ಗಂಟಿಹೊಳೆಯವರ ಪ್ರಶ್ನೆಗೆ ತೋಟಗಾರಿಕಾ ಸಚಿವ ಉತ್ತರ

ಬೆಂಗಳೂರಿನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈ ಬಾರಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ರೈತರಿಗೆ ಸಂಕಷ್ಟ ಉಂಟಾಗಿರುವ ವಿಚಾರ ಹಾಗೂ ಹೆಮ್ಮಾಡಿ ಸೇವಂತಿಗೆ ಬೆಳೆಗಾರರ ಸಂಕಷ್ಟ ನಿವಾರಣೆಗೆ ಸರಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ರಾಜ್ಯ ತೋಟಗಾರಿಕಾ ಸಚಿವರಾದ ಶ್ರೀ ಎಸ್ ಎಸ್ ಮಲ್ಲಿಕಾರ್ಜುನ್ ರವರು ಬೈಂದೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 25 ಎಕರೆ ಪ್ರದೇಶದಲ್ಲಿ ಹೆಮ್ಮಾಡಿ ಸೇವಂತಿಗೆ ಬೆಳೆಯಲಾಗುತ್ತಿದೆ ಈ ಬಾರಿ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದ ರೈತರಿಗೆ ಅನಾನುಕೂಲ ಉಂಟಾಗಿರುವುದು ಸರಕಾರದ ಗಮನಕ್ಕೆ ಬಂದಿದೆ. ಬೆಳೆಗಾರರ ಸಂಕಷ್ಟ ನಿವಾರಣೆಗೆ ಇಲಾಖೆಯಿಂದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ತಜ್ಞರ ತಂಡದೊಂದಿಗೆ ದಿನಾಂಕ : 02-02-2024 ಹಾಗೂ 22-02-2025 ರಂದು ಭೇಟಿ ಮಾಡಿ ಸೇವಂತಿಗೆ ಬೆಳೆಯಲು ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಮಾಹಿತಿ ನೀಡಲಾಗಿರುತ್ತದೆ ಎಂದು ಉತ್ತರಿಸಿದ್ದಾರೆ.
ಹೆಮ್ಮಾಡಿ ಸೇವಂತಿಗೆ ಜಿಐ ಮಾನ್ಯತೆ ದೊರಕಿಸಲು ಕ್ರಮದ ಪರಿಶೀಲನೆ:
ಉಡುಪಿ ಜಿಲ್ಲೆಯಲ್ಲಿ ಹೆಮ್ಮಾಡಿ ಸೇವಂತಿಗೆಯು ವಿಶಿಷ್ಟ ಬೆಳೆಯಾಗಿದ್ದು, ಇದರ ಅಭಿವೃದ್ಧಿಗೆ ಪೂರಕ ಸೌಲಭ್ಯಗಳಿಲ್ಲದೆ ವರ್ಷದಿಂದ ವರ್ಷಕ್ಕೆ ಇಳುವರಿ ಕಡಿಮೆಯಾಗುತ್ತಿರುವುದರಿಂದ ಈ ಬೆಳೆಯನ್ನು ಸಂರಕ್ಷಿಸಲು ಹಾಗೂ ಜಿಐ ಮಾನ್ಯತೆ ನೀಡಲು ಸರಕಾರ ಕ್ರಮವಹಿಸುವುದೇ ಎಂದು ಶಾಸಕರು ಹೇಳಿದ ಮರು ಪ್ರಶ್ನೆಗೆ ಉತ್ತರಿಸಿದ ಸಚಿವರು ಹೆಮ್ಮಾಡಿ ಸೇವಂತಿಗೆ ಸರಕುಗಳ ಭೌಗೋಳಿಕ ಮಾನ್ಯತೆ ದೊರಕಿಸಲು ಹೂ ಬಿಡುವ ಅವಧಿಯಲ್ಲಿ ತಳಿ ವೈಶಿಷ್ಟ್ಯತೆ ಅಧ್ಯಯನ ಸಂರಕ್ಷಣೆ ಐತಿಹಾಸಿಕ ಅಂಶಗಳ ಸಂಗ್ರಹಣೆ ಅಗತ್ಯವಾಗಿರುತ್ತದೆ ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಶಾಸಕರ ಪ್ರಶ್ನೆಗೆ ಸಚಿವರು ಉತ್ತರ ನೀಡಿದ್ದಾರೆ.