ರೋಟರಿ ಮಣಿಪಾಲ ಹಿಲ್ಸ್‌ನಿಂದ ಮಲೇರಿಯಾ ಮುಕ್ತ ಮಣಿಪಾಲ ಅಭಿಯಾನಕ್ಕೆ ಚಾಲನೆ

ಮಣಿಪಾಲವನ್ನು ಮಲೇರಿಯಾ ಮುಕ್ತವಾಗಿಸುವ ನಿಟ್ಟಿನಲ್ಲಿ ರೋಟರಿ ಮಣಿಪಾಲ ಹಿಲ್ಸ್ ಸಂಸ್ಥೆಯು ರೋಟರಿಯನ್ಸ್ ಎಗೇನ್ಸ್ಟ್ ಮಲೇರಿಯಾ (RAM-G) ಸಹಯೋಗದೊಂದಿಗೆ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಟರಿ ಮಣಿಪಾಲ ಹಿಲ್ಸ್ ಅಧ್ಯಕ್ಷೆ ರೊಟೇರಿಯನ್ ಸುಪರ್ಣಾ, “ಸಮುದಾಯದ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದರು.

ಎಂಐಟಿ ನಿರ್ದೇಶಕರಾದ ಡಾ. ಅನಿಲ್ ರಾಣಾ ಅವರು ಮಣಿಪಾಲ ಸರೋವರದ ಬಳಿ ಬೇವಿನ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೊಳ್ಳೆಗಳನ್ನು ಓಡಿಸುವ ಗುಣ ಹೊಂದಿರುವ ತುಳಸಿ ಮತ್ತು ಲೆಮನ್‌ಗ್ರಾಸ್ ಸಸಿಗಳನ್ನು ನೆಡುವ ಮೂಲಕ ಎಜಿ ಜಗನ್ನಾಥ ಕೋಟೆ ಮತ್ತು ಅರ್ನವ್ ಅಮಿನ್ ಬೆಂಬಲ ನೀಡಿದರು. ಪಿಎಚ್‌ಸಿ ಮಣಿಪುರದ ಡಾ. ಅಂಜಲಿ ರೋಗ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಿದರು.

ಡಾ. ವೃಂದಾ ಫ್ರೆಸ್ಟನ್ ತ್ಯಾಜ್ಯ ವಿಲೇವಾರಿ ಕುರಿತು ಮಾಹಿತಿ ನೀಡಿದರು. ಹೆಜ್ಜೆಯನ್ನಿಟ್ಟಿದೆ. ಸಮುದಾಯದ ಸಹಭಾಗಿತ್ವದೊಂದಿಗೆ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟುವ ಉಪಕ್ರಮಕ್ಕೆ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೋಟರಿ ಮಣಿಪಾಲ ಹಿಲ್ಸ್ ಅಧ್ಯಕ್ಷೆ ರೊಟೇರಿಯನ್ ಸುಪರ್ಣಾ, “ಸಮುದಾಯದ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ” ಎಂದರು. ಎಂಐಟಿ ನಿರ್ದೇಶಕರಾದ ಡಾ. ಅನಿಲ್ ರಾಣಾ ಅವರು ಮಣಿಪಾಲ ಸರೋವರದ ಬಳಿ ಬೇವಿನ ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೊಳ್ಳೆಗಳನ್ನು ಓಡಿಸುವ ಗುಣ ಹೊಂದಿರುವ ತುಳಸಿ ಮತ್ತು ಲೆಮನ್‌ಗ್ರಾಸ್ ಸಸಿಗಳನ್ನು ನೆಡುವ ಮೂಲಕ ಎಜಿ ಜಗನ್ನಾಥ ಕೋಟೆ ಮತ್ತು ಅರ್ನವ್ ಅಮಿನ್ ಬೆಂಬಲ ನೀಡಿದರು. ಪಿಎಚ್‌ಸಿ ಮಣಿಪುರದ ಡಾ. ಅಂಜಲಿ ರೋಗ ತಡೆಗಟ್ಟುವಿಕೆ ಬಗ್ಗೆ ಜಾಗೃತಿ ಮೂಡಿಸಿದರು. ಡಾ. ವೃಂದಾ ಫ್ರೆಸ್ಟನ್ ತ್ಯಾಜ್ಯ ವಿಲೇವಾರಿ ಕುರಿತು ಮಾಹಿತಿ ನೀಡಿದರು. ಆರೋಗ್ಯ ಮೂಲಸೌಕರ್ಯ ಬಲಪಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ (ಪಿಎಚ್‌ಸಿ) ವೈದ್ಯಕೀಯ ಕಿಟ್‌ಗಳನ್ನು ವಿತರಿಸಲಾಯಿತು. ಮಲೇರಿಯಾ ಜಾಗೃತಿಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಎಂಐಟಿ ಎನ್‌ಎಸ್‌ಎಸ್ ಘಟಕಕ್ಕೆ ರೋಟರಿ ಎಕ್ಸಲೆನ್ಸ್ ಪ್ರಶಸ್ತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಬಾರ್ಕೂರಿನ ರೊಟೇರಿಯನ್ ಗಣೇಶ್ ಶೆಟ್ಟಿ, ಡಾ. ಬಾಲಕೃಷ್ಣ ಮದ್ದೋಡಿ ಉಪಸ್ಥಿತರಿದ್ದರು.
