ಮುಂಬರುವ ಅಗ್ನಿಪಥ್ ಲಿಖಿತ ಮತ್ತು ದೈಹಿಕ ಸದೃಢತೆಯ ಪರೀಕ್ಷೆಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಆಹೋರಾತ್ರಿ ತರಬೇತಿ ಪ್ರಾರಂಭ

ಭಾರತ ಸರಕಾರದ ಮಹತ್ವಕಾಂಕ್ಷಿ ಯೋಜನೆಯಾದ ‘ಅಗ್ನಿಪಥ್ ‘ ಯೋಜನೆಯಡಿಯಲ್ಲಿ ಪ್ರತಿ ವರ್ಷ ಅಗ್ನಿವೀರರಾಗಿ ಆಯ್ಕೆ ಮಾಡಲು ನಡೆಸಲಾಗುವ ನೇಮಕಾತಿ, ಲಿಖಿತ ಮತ್ತು ದೈಹಿಕ ಸಾಧ್ಯತೆಯ ಪರೀಕ್ಷೆಗಳಿಗೆ ಪೂರ್ವ ತಯಾರಿ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ದಿನಾಂಕ 18/06/2025 ಬುಧವಾರದಿಂದ ಆಹೋರಾತ್ರಿ ತರಬೇತಿಯನ್ನು ಪ್ರಾರಂಭಿಸಲಾಗುತ್ತಿದೆ.

ತರಬೇತಿಯು ಮೂರು ವಿಭಾಗದಲ್ಲಿ ನಡೆಯುತ್ತದೆ ಸದ್ಯ ಓದುತ್ತಿರುವ /ಉದ್ಯೋಗದಲ್ಲಿದ್ದು ಅಗ್ನಿಪಥ್ ಯೋಜನೆಗೆ ಅರ್ಜಿ ಸಲ್ಲಿಸಿದ್ದು ಜೂನ್ 30 ರಿಂದ ನಡೆಯಲಿರುವ ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ರಾತ್ರಿ 7 ರಿಂದ 10 ರವರೆಗೆ ಲಿಖಿತ ಪರೀಕ್ಷಾ ನೇರ ತರಬೇತಿ ಮತ್ತು ಬೆಳಗ್ಗೆ 5 ರಿಂದ 7 ರವರೆಗೆ 2 ಗಂಟೆಗಳ ದೈಹಿಕ ಸದೃಢತೆಯ ಮೈದಾನ ತರಬೇತಿ ಇರುತ್ತದೆ ಇವರು ತರಬೇತಿ ಅವಧಿಯನ್ನು ಹೊರತುಪಡಿಸಿ ಕಾಲೇಜು/ ಉದ್ಯೋಗಕ್ಕೆ ತೆರಳಬಹುದಾಗಿದೆ. ಎರಡನೇ ವಿಭಾಗದಲ್ಲಿ ಪೂರ್ಣ ಅವಧಿಯ ತರಬೇತಿಯ ಕೂಡ ಲಭ್ಯವಿದ್ದು ವಿದ್ಯಾಮಾತಾ ಅಕಾಡೆಮಿಯಲ್ಲಿ ಸಂಪೂರ್ಣ ತರಬೇತಿಯನ್ನು ಪಡೆದುಕೊಳ್ಳಬಹುದಾಗಿದೆ. ಮೂರನೇ ವಿಭಾಗದಲ್ಲಿ ಇನ್ನೂ ಅರ್ಜಿ ಸಲ್ಲಿಸದೆ ಇನ್ನಷ್ಟೇ ತಯಾರಿಯನ್ನು ಮಾಡಲು ಇಚ್ಛಿಸುವ 15 ವರ್ಷದಿಂದ 21 ವರ್ಷದವರೆಗಿನ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಪ್ರತಿ ಭಾನುವಾರ ಬೆಳಗ್ಗೆ 8.30 ರಿಂದ ಮಧ್ಯಾಹ್ನ 1 ರವರೆಗೆ ವಿಶೇಷ ತರಬೇತಿಯ ಕೂಡ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ
ವಿದ್ಯಾಮಾತಾ ಅಕಾಡೆಮಿ ಹಿಂದೂಸ್ತಾನ್ ಕಾಂಪ್ಲೆಕ್ಸ್,ಎ.ಪಿ.ಯಂ.ಸಿ ರೋಡ್,ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
PH: 9620468869/ 9148935808
ಸುಳ್ಯ ಶಾಖೆ: TAPCMS ಬಿಲ್ಡಿಂಗ್, ರಥಬೀದಿ ಸುಳ್ಯ PH-9448527606
ಅಗ್ನಿಪಥ್ ಯೋಜನೆ ಸೇರಿದಂತೆ ಎಲ್ಲಾ ಸಶಸ್ತ್ರ ಪಡೆಗಳ ತರಬೇತಿಗಾಗಿ ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಬಹುದಾಗಿದೆ, ಭಾರತೀಯ ಸೇನಾ ತರಬೇತಿ ಪಡೆದುಕೊಳ್ಳುವ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿಯ ಪ್ರವೇಶಾತಿಯೊಂದಿಗೆ ಸೇನಾ ನೇಮಕಾತಿಯ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ಭಾಗ್ಯೇಶ್ ರೈ
ಆಡಳಿತ ನಿರ್ದೇಶಕರು ವಿದ್ಯಾಮಾತಾ ಅಕಾಡೆಮಿ