ಪಡುಬಿದ್ರಿ : ಶಿಕ್ಷಣವು ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಮತ್ತು ಸಮಾಜದ ಪ್ರಗತಿಗೆ ಅಧಾರವಾಗಿದೆ. ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ ಅವರ ಶಿಕ್ಷಣಕ್ಕೆ ಪ್ರೇರಣೆ ಯಾಗುವ ಕೆಲಸ ಮಾದರಿಯಾಗಿದೆ. ಅನಾದಿ ಕಾಲದಿಂದಲೂ ಹಿರಿಯರು ಸಮುದಾಯದ ವಿದ್ಯಾರ್ಥಿಗಳಿಗಾಗಿ ವಿದ್ಯಾನಿಧಿ ಕಾಯ್ದಿರಿಸಿ ಪ್ರತಿವರ್ಷ ವಿದ್ಯಾರ್ಥಿ ವೇತನ ನೀಡುವ ಸಂಕಲ್ಪ ಹೊಂದಿದ್ದಾರೆ.. ಬಡತನದ ಕಾರಣದಿಂದ ಶಿಕ್ಷಣ ವಂಚಿತರಾಗಬಾರದು.
ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದು ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೂಳಿಸಲು ಅತ್ಯಂತ ಅಗತ್ಯವಾಗಿದೆ.ಆಧುನಿಕ ಯುಗದಲ್ಲಿ ಎಲ್ಲಾ ಮಕ್ಕಳು ಪ್ರತಿಭಾವಂತರಾಗಿದ್ದಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದ ಮೇಲೆ ನಂಬಿಕೆ ಇಟ್ಟುಕೊಂಡು ವಿದ್ಯಾಭ್ಯಾಸ ಮಾಡಬೇಕು ಎಂದು ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ಅಧ್ಯಕ್ಷರಾದ ಅಶೋಕ್ ಸಾಲ್ಯಾನ್ ಹೇಳಿದರು.
ಅವರು ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ಮತ್ತು ಕಾಡಿಪಟ್ನ ಮೊಗವೀರ ಮಹಾಸಭಾ ಮುಂಬೈ ಸಮಿತಿ ವತಿಯಿಂದ ಕಾಡಿಪಟ್ನ ವಿಷ್ಣು ಭಜನಾ ಮಂದಿರದ ಆವರಣದಲ್ಲಿ ನಡೆದ ” ವಿದ್ಯಾರ್ಥಿ ವೇತನ ವಿತರಣಾ ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.
2026-26 ಸಾಲಿನ 70 ವಿದ್ಯಾರ್ಥಿಗಳಿಗೆ ರೂ.180000/- ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾಡಿಪಟ್ನ ಮೊಗವೀರ ಮಹಾಸಭಾ ಉಪಾಧ್ಯಕ್ಷ ಹೇಮಚಂದ್ರ ಸಾಲ್ಯಾನ್. ಕೋಶಾಧಿಕಾರಿ ಅಶೋಕ್ ಬಂಗೇರ,ಮುಂಬೈ ಸಮಿತಿ ಪದಾಧಿಕಾರಿಗಳಾದ ಸುರೇಶ್ ಅಮೀನ್, ಪುಷ್ಪರಾಜ್ ಕೋಟ್ಯಾನ್, ಪಡುಬಿದ್ರಿ ಕಾಡಿಪಟ್ನ ಮೊಗವೀರ ಮಹಾಸಭಾ ಅಡಳಿತ ಮಂಡಳಿ ಸದಸ್ಯರಾದ ವಿಶ್ವಾಸ್ ಅಮೀನ್, ಸತೀಶ್ ಸಾಲ್ಯಾನ್, ಶರತ್ ಕುಮಾರ್, ಜೀವನ್ ಸುವರ್ಣ,ಜಗದೀಶ್ ಬಂಗೇರ,ಮಿಥುನ್ ಸಾಲ್ಯಾನ್, ದೇವದಾಸ್ ಬಂಗೇರ,ಕಾಡಿಪಟ್ನ ಮೊಗವೀರ ಮಹಿಳಾ ಮಹಾಸಭಾ ಅಧ್ಯಕ್ಷೆ ವಿಜಯ ಮೆಂಡನ್ ಕೋಶಾಧಿಕಾರಿ ಚಂದ್ರಿಕಾ ಉದಯ್ ಕಾಂಚನ್ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ನಿರೂಪಿಸಿ ವಂದಿಸಿದರು..


