ಉರ್ವಾದಲ್ಲಿ SCS ರಿವರ್ಸೈಡ್ ಇಂಟರ್ನ್ಯಾಷನಲ್ ಅಕಾಡೆಮಿ ಮತ್ತು SCS ಪ್ರಿಸ್ಕೂಲ್ ಉದ್ಘಾಟನಾ ಸಮಾರಂಭ

ಕರ್ನಾಟಕ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟ್‌ನ ನಿರ್ವಹಣೆಯಲ್ಲಿರುವ ಎಸ್‌ಸಿಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳ ಅಧೀನದಲ್ಲಿ ಎಸ್‌ಸಿಎಸ್ ರಿವರ್‌ಸೈಡ್ ಇಂಟರ್‌ನ್ಯಾಶನಲ್ ಅಕಾಡೆಮಿ ಎಂಬ ಹೆಸರಿನ ಹೊಸ ಪ್ರಾಥಮಿಕ ಶಾಲೆ ಮತ್ತು ಎಸ್‌ಸಿಎಸ್ ಪ್ರಿಸ್ಕೂಲ್ ಎಂಬ ಹೊಸ ಪ್ರಿಸ್ಕೂಲ್ ಮಂಗಳೂರಿನ ಲಾಂಗ್ ಲೇನ್, ಉರ್ವಾದ ರಿವರ್‌ಸೈಡ್ ಕ್ಯಾಂಪಸ್‌ನಲ್ಲಿ ಉದ್ಘಾಟನೆಗೊಳ್ಳಲು ಸಜ್ಜುಗೊಂಡಿವೆ.

ಉದ್ಘಾಟನಾ ಸಮಾರಂಭವು ರಿವರ್‌ಸೈಡ್ ಕ್ಯಾಂಪಸ್‌ನಲ್ಲಿ ಸೋಮವಾರ, 5 ನೇ ಜೂನ್ 2023 ರಂದು ಬೆಳಿಗ್ಗೆ 9.30 ಕ್ಕೆ ನಡೆಯಲಿದೆ. ಎಸ್‌ಸಿಎಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ರಜನೀಶ್ ಸೊರಕೆ ನೂತನ ಶಾಲೆಗಳನ್ನು ಸ್ಥಾಪಕ ಅಧ್ಯಕ್ಷ ಡಾ.ಅಮರನಾಥ ಸೊರಕೆ ಹಾಗೂ ಕಾರ್ಯದರ್ಶಿ ಡಾ.ಅಭಿನಯ್ ಸೊರಕೆಯವರ ಜೊತೆಗೂಡಿ ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಎಸ್‌ಸಿಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ನ ಆಡಳಿತಾಧಿಕಾರಿ ಯು.ಕೆ.ಖಾಲಿದ್, ಎಸ್‌ಸಿಎಸ್ ರಿವರ್‌ಸೈಡ್ ಅಕಾಡೆಮಿಯ ಪ್ರಾಂಶುಪಾಲರಾದ ಶ್ರೀಮತಿ ಹೆಲೆನ್ ಲೋಬೋ, ಎಸ್‌ಸಿಎಸ್ ಪ್ರಿಸ್ಕೂಲ್ ಪ್ರಾಂಶುಪಾಲರಾದ ಶ್ರೀಮತಿ ವಿನಯಾ ಡಿ.ಸೋಜಾ ಉಪಸ್ಥಿತರಿರುವರು.

Related Posts

Leave a Reply

Your email address will not be published.