ಎಸ್.ಡಿ.ಎಂ ಅಂಗಳದಲ್ಲಿ ಧ್ವಜಾರೋಹಣ: ಸಂಸ್ಕøತಿ ವೈವಿಧ್ಯತೆಯ ಅನಾವರಣ

ಉಜಿರೆ, ಜ 26: ಉಜಿರೆಯ ಎಸ್.ಡಿ.ಎಂ ಕಾಲೇಜಿನ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಧ್ವಜಾರೋಹಣವು ದೇಶದ ವೈವಿಧ್ಯತೆ, ಶಿಸ್ತುಬದ್ಧತೆ ಮತ್ತು ಸಾಂಸ್ಕøತಿಕ ಶ್ರೇಷ್ಠತೆಯನ್ನು ಪ್ರತಿಬಿಂಬಿಸಿತು. ಗಣರಾಜ್ಯೋತ್ಸವ ದಿನದ ಅಂಗವಾಗಿ ಕಾಲೇಜಿನ ಎನ್.ಸಿ.ಸಿ ವಿಭಾಗದ ಎಲ್ಲಾ ಕೆಡೆಟ್‍ಗಳ ಶಿಸ್ತುಬದ್ಧ ಪಾಲ್ಗೊಳ್ಳುವಿಕೆ ಮುಖ್ಯ ಆಕರ್ಷಣೆಯಾಗಿತ್ತು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಧ್ವಜಾರೋಹಣವನ್ನು ನೆರವೇರಿಸಿದರು. ಕಾಲೇಜಿನ ರೋವರ್ಸ್ ಹಾಗೂ ರೇಂಜರ್ಸ್‍ಗಳ ಬ್ಯಾಂಡ್ ಸೆಟ್‍ನ ನಿನಾದ ಗಮನ ಸೆಳೆಯಿತು. ಈ ನಿನಾದಕ್ಕೆ ತಕ್ಕಂತೆ ಶಿಸ್ತುಬದ್ಧ ಹೆಜ್ಜೆ ಹಾಕಿ ಪಥ ಸಂಚಲನ ನಡೆಸಿದ ಎನ್.ಸಿ.ಸಿ ಕೆಡೆಟ್‍ಗಳು ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿದ್ದರು. ಆರ್ಮಿ ವಿಭಾಗದ ನೂರು ಕೆಡೆಟ್‍ಗಳು, ನೇವಿ ವಿಭಾಗದಲ್ಲಿ ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ತ್ರಿವರ್ಣ ಧ್ವಜಗಳನ್ನು ಹಿಡಿದು ರಾಷ್ಟ್ರಭಿಮಾನ ವ್ಯಕ್ತಪಡಿಸಿದರು.

ಬಣ್ಣದ ಬಲೂನುಗಳ ಗೊಂಚಲುಗಳು ದೇಶಪ್ರೇಮದ ದ್ಯೋತಕವಾಗಿದ್ದವು. ಕೇಸರಿ, ಬಿಳಿ, ಹಸಿರು ಬಣ್ಣಗಳ ವಸ್ತ್ರಗಳು ಹಾಗೂ ನೀಲಿ ಬಣ್ಣದ ಚಕ್ರವನ್ನು ಹಿಡಿದುಕೊಂಡು ‘ಸಾರೇ ಜಹಾಂಸೆ ಅಚ್ಛಾ’ ಎಂಬ ದೇಶ ಭಕ್ತಿಗೀತೆಯ ಮುಖೇನ ತ್ರಿವರ್ಣ ಧ್ವಜದ ಪರಿಕಲ್ಪನೆಯನ್ನು ಕಲಾಕೇಂದ್ರದ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿ ನಿಲಯದ ಮಕ್ಕಳು ವಿಶಿಷ್ಟ ರೀತಿಯಲ್ಲಿ ಪ್ರಸ್ತುತಪಡಿಸಿದರು. ಇದೇ ಸಂದರ್ಭದಲ್ಲಿ ಎಸ್.ಡಿ.ಎಂ ಪ್ರಕೃತಿ ಹಾಗೂ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳು ದೇಶದ ವಿವಿಧ ರಾಜ್ಯಗಳ ಉಡುಗೆ-ತೊಡುಗೆಗಳನ್ನು ಅನಾವರಣಗೊಳಿಸಿದರು. ‘ವಂದೇ ಮಾತರಂ’ ಹಾಡಿಗೆ ಕರ್ನಾಟಕ, ತಮಿಳುನಾಡು, ಕೇರಳ, ಮಧ್ಯಪ್ರದೇಶ, ಒಡಿಸ್ಸಾ, ಹಿಮಾಚಲಪ್ರದೇಶ, ಮೇಘಾಲಯ, ಪಂಜಾಬ್, ಗುಜರಾತ್, ಜಮ್ಮು ಕಾಶ್ಮೀರ, ಉತ್ತರಪ್ರದೇಶ ಸೇರಿದಂತೆ ಬೇರೆ ಬೇರೆ ರಾಜ್ಯಗಳ ಸಂಸ್ಕøತಿಯನ್ನು ಬಿಂಬಿಸಲಾಯಿತು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದಲ್ಲಿ ಭಿನ್ನ ಆಚರಣೆಗಳಿದ್ದರೂ ನಾವೆಲ್ಲರೂ ಭಾರತೀಯರು ಎಂಬುದನ್ನು ನೃತ್ಯದ ಮುಖೇನ ಮನವರಿಕೆಮಾಡಿಕೊಟ್ಟರು. ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಜಯಕುಮಾರ ಶೆಟ್ಟಿ, ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ ಸೇರಿದಂತೆ ಸಂಸ್ಥೆಯ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಹಾಗೂ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿವರ್ಗ, ಕ್ರೀಡಾವಿಭಾಗ ಹಾಗೂ ಊರಿನ ನಾಗರಿಕರು
