ಸತ್ಯಾತ್ಮ ಭಟ್ ಕುಂಟಿನಿ ಸ್ಕ್ರಿಪ್ಟ್ ರೈಟಿಂಗ್ನಲ್ಲಿ ಪ್ರಥಮ

ಎಸ್‌ಡಿಎಂ ಕಾನೂನು ಕಾಲೇಜು ಆಯೋಜಿಸಿದ ಸ್ಕ್ರಿಪ್ಟ್ ರೈಟಿಂಗ್ ಸ್ಪರ್ಧೆಯಲ್ಲಿ ಸತ್ಯಾತ್ಮ ಭಟ್ ಕುಂಟಿನಿ , ೨ನೇ ವರ್ಷ ಬಿ.ಎ. ಎಲ್ ಎಲ್ ಬಿ ಶಿಕ್ಷಣವನ್ನು ಪಡೆಯುತ್ತಿರುವ ಇವರು ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ.ಹಾಗೆಯೇ ಇವರು ಬರೆದ ” ಸ್ವಪ್ನ ಕಥಾ ” ಎಂಬ ಕಥೆಯನ್ನು ಬೀದಿ ನಾಟಕವಾಗಿ ಮಂಗಳೂರಿನ ನಿರ್ಮಾರ್ಗ ಪಂಚಾಯತ್ ಮುಂಭಾಗದಲ್ಲಿ ಹಾಗೂ ಸ್ಟೇಟ್ ಬ್ಯಾಂಕ್ ಬಸ್ಟ್ಯಾಂಡಿನಲ್ಲಿ ಬೀದಿ ನಾಟಕವಾಗಿ ಪ್ರದರ್ಶಿಸಲಾಗಿದೆ.ಈ ಕಥೆಯು ಬಾಲ್ಯವಿವಾಹ ವಾಗಿರುವ ಸ್ವಪ್ನ ಎಂಬ ಕಥಾ ಪಾತ್ರದ ಬಾಲ್ಯವಿವಾಹವಾಗಿ ಅನುಭವಿಸಿದ ಕಷ್ಟ ಹಾಗೂ ಒಬ್ಬ ಹೆಣ್ಣು ಮಗಳನ್ನು ಸಮಾಜವು ಎಷ್ಟು ಮೌನಿಯಾಗಿ ಮಾಡುತ್ತದೆ ? ಹಾಗೂ ನಾವು ಸಮಾಜ ಜ್ಞಾನ ಇದ್ದವರು ಧ್ವನಿಯಾಗುವ ಬದಲು ಮೌನಿಯಾಗಿದ್ದೇವೆ. ನಮ್ಮ ದೇಶದಿಂದ ಈ ಕೆಟ್ಟ ಪದ್ಧತಿಯನ್ನು ಹೋಗಲಾಡಿಸುವ ಕುರಿತು ಬರೆಯಲಾಗಿದೆ.
