ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ SDPI ವತಿಯಿಂದ ಒಲವಿನ ಕರ್ನಾಟಕ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮ
ಮಂಗಳೂರು: ಅ 30: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಸಮ್ರದ್ದ , ಸದ್ರಡ,ಸ್ವಾಭಿಮಾನ ಕರ್ನಾಟಕ ಎಸ್ಡಿಪಿಐ ಸಂಕಲ್ಪ ಎಂಬ ಘೋಷಣೆ ಯೊಂದಿಗೆ ಒಲವಿನ ಕರ್ನಾಟಕ ಎಂಬ ಹೆಸರಿನಲ್ಲಿ ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನವೆಂಬರ್ ತಿಂಗಳಲ್ಲಿ ಕರ್ನಾಟಕ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ನವೆಂಬರ್ ಒಂದರಂದು ಬೆಳಿಗ್ಗೆ ಪಕ್ಷದ ಗ್ರಾಮ ಸಮಿತಿ ಮತ್ತು ವಿಧಾನಸಭಾ ಕ್ಷೇತ್ರ ಸಮಿತಿಗಳ ವತಿಯಿಂದ ಧ್ವಜಾರೋಹಣ ,ಸಿಹಿತಿಂಡಿ ವಿತರಣೆ ಮತ್ತು ರಾಜ್ಯೋತ್ಸವದ ಸಂದೇಶ ಸಾರುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಅಂದು ಸಾಯಂಕಾಲ 6:30 ಕ್ಕೆ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನ ಪುರಭವನದ ಮುಂಭಾಗದಲ್ಲಿ ಸಭಾ ಕಾರ್ಯಕ್ರಮ ಮತ್ತು ಕರಾವಳಿಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಈ ಕಾರ್ಯಕ್ರಮಕ್ಕೆ ಬರಹಗಾರರು, ಪ್ರಾಧ್ಯಾಪಕರು , ಕಲಾವಿದರು, ಪಕ್ಷದ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ .ಎಲ್ಲಾ ಕನ್ನಡ ಭಾಷಾ ಪ್ರೇಮಿಗಳು ಈ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಭಾಗವಹಿಸಬೇಕೆಂದು SDPI ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಪ್ರಕಟಣೆಯಲ್ಲಿ ಆಗ್ರಹಿಸಿದರು