ಉತ್ತಮ ಅಂಕಗಳೊoದಿಗೆ ಎಂಡೋ ಸಂತ್ರಸ್ತ ವಿದ್ಯಾರ್ಥಿಳಿಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣ

ರಾಮಕುಂಜ ವಿದ್ಯಾಚೇತನ ವಿಶೇಷ ಶಾಲೆಯ ಎಂಡೋ ಸಂತ್ರಸ್ತ ವಿದ್ಯಾರ್ಥಿಳಿಬ್ಬರು ಉತ್ತಮ ಅಂಕಗಳೊoದಿಗೆ ಉತ್ತೀರ್ಣ
ದ.ಕ: ಕಡಬ ತಾಲೂಕಿನ ರಾಮಕುಂಜದಲ್ಲಿ ಸೇವಾ ಭಾರತಿಯವರು ನಡೆಸುತ್ತಿರುವ ವಿದ್ಯಾಚೇತನ ವಿಶೇಷ ಶಾಲೆಯ ಎಂಡೋ ಸಲ್ಫಾನ್ ಸಂತ್ರಸ್ತರಿಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ಎಂಡೋಸಲ್ಫಾನ್ ಸಂತ್ರಸ್ತರಾದ ಮೋಹನ ಮತ್ತು ಪದ್ಮಶೇಖರ ಅವರು ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿ ಒಬ್ಬರು ಪ್ರಥಮ ಶ್ರೇಣಿ ಹಾಗೂ ಇನ್ನೊಬ್ಬ ವಿದ್ಯಾರ್ಥಿ ದ್ವತೀಯ ಶ್ರೇಣಿಯಲ್ಲಿ ಉತ್ತೀಣ್ರಾಗಿದ್ದಾರೆ. ಮೋಹನ ಶೇ.76 ಮತ್ತು ಪದ್ಮಶೇಖರ ಶೇ.54.16 ಅಂಕ ಗಳಿಸಿದ್ದಾರೆ. ಇಬ್ಬರೂ ಬಡಕುಟುಂಬದಿ0ದ ಬಂದವರಗಿದ್ದಾರೆ ಎಂದು ಸಂಸ್ಥೆಯ ಪ್ರಮುಖರು ತಿಳಿಸಿದ್ದಾರೆ.

ರಾಮಕುಂಜ ಗ್ರಾಮದ ಕೊಂಡ್ಯಾಡಿ ನಿವಾಸಿ ಅಣ್ಣು ಪೂಜಾರಿ ಮತ್ತು ವಾರಿಜಾ ದಂಪತಿಯ ಪುತ್ರ ದೃಷ್ಟಿ ವಿಕಲಚೇತನ ಮೋಹನ ಅವರು ಶೋಭಾ ಎಂಬವರ ನೆರವಿನಿಂದ ಅವರ ಪರೀಕ್ಷೆ ಬರೆದು ಪ್ರಥಮ ದರ್ಜೆ (455/600)ಯಲ್ಲಿ ತೇರ್ಗಡೆ ಹೊಂದಿದ್ದಾನೆ. ಈತ ಸ್ವತಃ ದುಡಿದು ಸಂಪಾದನೆ ಮಾಡುತ್ತಾನೆ. ಸಂಪೂರ್ಣ ದೃಷ್ಠಿಹೀನನಗಿರುವ ಮೋಹನ ಶಾಲೆ ಬಿಟ್ಟು ಮನೆಗೆ ಹೋದ ಬಳಿಕ ಅಕ್ಕಪಕ್ಕದರ ಮನೆಗೆ ಅಡಕೆ ಸುಳಿಯಲು ತೆರಳುತ್ತಾನೆ, ಬೆಳಿಗ್ಗೆ ಬೇಗ ಎದ್ದು ಏಳು ಗಂಟೆಯ ತನಕ ಅಡಕೆ ಸುಳಿದು ಬಳಿಕ ಶಾಲೆಗೆ ಹಾಜರಾಗುತ್ತಿದ್ದ. ವಿಶೇಷವೆಂದರೆ ತನಗೆ ಪರೀಕ್ಷೆಗೆ ಸಹಕರಿಸಿರುವಾಕೆಗೆ ಈತನೇ ದುಡಿದ ಸಂಪಾದನೆಯ 3000 ಸಾವಿರ ರೂ ಗೌರವಧನ ನೀಡಿ ಸ್ವಾಭಿಮಾನಿಯಾಗಿ ಮಾದರಿಯಾಗಿದ್ದಾನೆ.

ಸವಣೂರು ಗ್ರಾಮದ ಪರಣೆ ನಿವಾಸಿ ನಾರಾಯಣ ಪೂಜಾರಿ ಮತ್ತು ಶ್ಯಾಮಲಾ ದಂಪತಿಯ ಪುತ್ರ ಪದ್ಮಶೇಖರ ಎಂಬ ಬುದ್ದಿಮಾಂದ್ಯ ಹುಡುಗ ಶಾಲಾ ಸಿಬ್ಬಂದಿ ಸವಿತಾ ಎ ಅವರ ಸಹಾಯದಿಂದ ದ್ವಿತೀಯ ದರ್ಜೆ (54.16%)ಯಲ್ಲಿ ತೇರ್ಗಡೆ ಹೊಂದಿದ್ದಾನೆ. ಈತ ಬುದಿಮಾದ್ಯನಾಗಿದ್ದರೂ ಮೂರು ಬಸ್ಸು ಬದಲಾಯಿಸಿಕೊಂಡು ಶಾಲೆಗೆ ಬರುತ್ತಿದ್ದ. ವಿದ್ಯಾಚೇತನ ವಿಶೇಷ ಶಾಲೆಯ ಮುಖ್ಯ ಶಿಕ್ಷಕಿ ಶಶಿಕಲಾ, ಶಿಕ್ಷಕರು, ಸಹಾಯಕರು ಹಾಗೂ ವಿದ್ಯಾರ್ಥಿಗಳು ಸಾಧಕ ವಿದ್ಯಾರ್ಥಿಗಳಿಗ ಸಹಕಾರ ನೀಡಿದ್ದಾರೆ. ಇವರು ಉಪ್ಪಿನಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದು ಇಲ್ಲಿನ ಪಿನ್ಸಿಪಾಲ್ ಸುಧೀರ್, ಸಿಬ್ಬಂದಿ ಸೌಮ್ಯ ಅವರ ಸಹಕಾರವನ್ನು ಸೇವಾ ಭಾರತಿ ಆಡಳಿತ ಮಂಡಳಿ ಅಭಿನಂದಿಸಿದೆ. ಇದೇ ಶಾಲೆಯ ಐದು ಜನ ದಿವ್ಯಾಂಗಚೇತನರು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿ ಉತ್ತಿರ್ಣಗೊಂಡಿದ್ದರು. ಅದೇ ವಿದ್ಯಾರ್ಥಿಗಳ ಪೈಕಿ ಇಬ್ಬರು ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿ ಸಾಧನೆ ಮಾಡಿದ್ದಾರೆ. ಈ ಶಾಲೆಯಲ್ಲಿ 30ಕ್ಕಿಂತಲು ಹೆಚ್ಚು ದಿವ್ಯಾಂಗಚೇತನ ಮಕ್ಕಳು ಪೋಷಣೆ ಪಡೆಯುತ್ತಿದ್ದಾರೆ

Related Posts

Leave a Reply

Your email address will not be published.