ಕಟೀಲು ಕ್ಷೇತ್ರದಲ್ಲಿ ಬಾಲಿವುಡ್ ಬೆಡಗಿ ಶಿಲ್ಪಾಶೆಟ್ಟಿ ಕುಟುಂಬ

ಬಾಲಿವುಡ್ ಬೆಡಗಿ ಕನ್ನಡತಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ್ಧಾರೆ.ದೇವಳದ ವತಿಯಿಂದ ನಟಿಗೆ ದೇವರ ಶೇಷ ವಸ್ತ್ರ ಪ್ರಸಾದ ನೀಡಿ ಆಶೀರ್ವದಿಸಲಾಯಿತು. ಯಕ್ಷಗಾನ ವೀಕ್ಷಣೆ ದೇವಿಯ ದರ್ಶನ ಪಡೆದ ನಂತರ ಶಿಲ್ಪಾ ಶೆಟ್ಟಿ ಯಕ್ಷಗಾನವನ್ನು ವೀಕ್ಷಿಸಿ ಕಲೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.ಈ ವೇಳೆ ಪತಿ ರಾಜ್ ಕುಂದ್ರ, ತಂಗಿ ಶಮಿತಾ ಶೆಟ್ಟಿ, ಕುಟುಂಬ ವರ್ಗದವರು, ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ಉಪಸ್ಥಿತರಿದ್ದರು.