ಕಾಪು ಪಡು ವ್ಯಾಪ್ತಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿಯೊಂದಿಗೆ ಗುರ್ಮೆ ಮತ ಯಾಚನೆ
ಕಾಪು ಪುರಸಭೆ ವ್ಯಾಪ್ತಿಯ ಕಾಪು ಪಡು ಗ್ರಾಮ ವ್ಯಾಪ್ತಿಯ ರಾಮನಗರ ಕಾರ್ಯಕರ್ತರ ಸಭೆಯಲ್ಲಿ ವಿಧಾನ ಸಭಾ ಚುನಾವಣೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಭಾಗವಹಿಸಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾನ್ಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಲಾಲಾಜಿ ಆರ್ ಮೆಂಡನ್, ಕಾಪು ಕ್ಷೇತ್ರ ಚುನಾವಣೆ ಉಸ್ತುವಾರಿ ಸುಲೋಚನಾ ಭಟ್, ಹಿರಿಯರಾದ ಗಂಗಾಧರ್ ಸುವರ್ಣ, ಪುರಸಭೆ ಬಿಜೆಪಿ ಅಧ್ಯಕ್ಷರು ಸಂದೀಪ್ ಶೆಟ್ಟಿ, ಪುರಸಭೆ ಸದಸ್ಯರು ನಿತಿನ್ ಕುಮಾರ್, ಅನಿಲ್ ಕುಮಾರ್, ನವೀನ್ ಅಮೀನ್ ಹಾಗೂ ಪಕ್ಷದ ಪ್ರಮುಖರಾದ ಸುರೇಂದ್ರ ಪಣಿಯೂರು, ನವೀನ್ ಎಸ್ ಕೆ, ಕುಶ ಸಾಲ್ಯಾನ್ ಜೊತೆಗಿದ್ದರು