ಶಾಂತಾ ಪುತ್ತೂರು ಇವರಿಗೆ ಕೆಂಪಮ್ಮ ರಾಜ್ಯ ಪುರಸ್ಕಾರ

ದಿನಾಂಕ 20..10..2022ರಂದು ಮೈಸೂರಿನ ಕಲಾಮಂದಿರದ ಕಿರು ರಂಗಮಂದಿರದಲ್ಲಿ ನಡೆದ ನಗೆ ಹಬ್ಬ ,ಸಾಂಸ್ಕೃತಿಕ ಕರ‍್ಯಕ್ರಮ , ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ನಾಡಿನ ಮಹಿಳಾ ಸಾಧಕರಿಗೆ ನೀಡುವ ಕೆಂಪೇಗೌಡರ ತಾಯಿ ಕೆಂಪಮ್ಮ ನವರ ಹೆಸರಿನಲ್ಲಿ ನೀಡುವ ಕೆಂಪಮ್ಮ ರಾಜ್ಯ ಪ್ರಶಸ್ತಿ ಶಾಂತಾ ಪುತ್ತೂರು ರವರಿಗೆ ಶಿಕ್ಷಣ ಹಾಗೂ ಸಾಹಿತ್ಯ ಸೇವೆಗಾಗಿ ಲಭಿಸಿದೆ.ಶಾಂತಾ ಪುತ್ತೂರು ಶಿಕ್ಷಕಿಯಾಗಿದ್ದು ಪ್ರಸ್ತುತ ಸರಕಾರಿ ಪ್ರೌಢಶಾಲೆ ಕಬಕ ದಲ್ಲಿ ಸೇವೆಸಲ್ಲಿಸುತ್ತಿದ್ದಾರೆ.ಸ್ನಾತಕೋತ್ತರ ಪದವೀಧರರಾಗಿದ್ದು ಯೋಗ ಡಿಪ್ಲೊಮಾ ಮಾಡಿರುತ್ತಾರೆ.ಇವರು ಬೊಳುವಾರು ನಿವಾಸಿಯಾಗಿದ್ದು ಇವರ ಸೌರಭ ಕವನ ಸಂಕಲನ ಬಿಡುಗಡೆಗೊಂಡಿದೆ.ಅನೇಕ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದು ಹಲವು ಸಾಹಿತ್ಯ ಕಮ್ಮಟ ನಡೆಸಿರುತ್ತಾರೆ.ನಾಡಿನ ವಿವಿಧ ಪತ್ರಿಕೆಗಳಲ್ಲಿ,ದೂರರ‍್ಶನದಲ್ಲಿ ಇವರ ಕವನ ಪ್ರಕಟಗೊಂಡಿದೆ.ಶಾಂತಿವನಟ್ರಸ್ಟ್ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಯ ಬಂಟ್ವಾಳ ತಾಲೂಕು ಯೋಗಸಂಘಟಕಿಯಾಗಿ,ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ದ ಜೊತೆ ಕರ‍್ಯರ‍್ಶಿ ಯಾಗಿ ಸೇವೆ ಸಲ್ಲಿಸಿರುತ್ತಾರೆ.ಯೋಗರಾಜ್ಯ ಸಂಪನ್ಮೂಲ ವ್ಯಕ್ತಿ ಹಾಗೂ ರಾಜ್ಯಮಟ್ಟದ ಯೋಗಾಸನ ತರ‍್ಪುಗಾರರು.ಪ್ರಸ್ತುತ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷ ರಾಗಿದ್ದು ,ರ‍್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾ ಕರ‍್ಯರ‍್ಶಿ ಯಾಗಿದ್ದು ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಕರ‍್ಯಕಾರಿ ಸಮಿತಿ ಸದಸ್ಯರು.ಇವರು ಶಿಕ್ಷಣ ಜ್ಞಾನ ಪತ್ರಿಕೆ ಯವರಿಂದ ಜ್ಞಾನಸಿಂಧು ರಾಜ್ಯ ಪ್ರಶಸ್ತಿ,ಕಥಾಬಿಂದು ಪ್ರಕಾಶನದವರಿಂದ ಚೈತನ್ಯಶ್ರೀ ರಾಜ್ಯ ಪ್ರಶಸ್ತಿ,ಬರಹಗಾರರ ಬಳಗದಿಂದ ಸಾಹಿತ್ಯ ಸಿಂಧು ರಾಜ್ಯ ಪ್ರಶಸ್ತಿ,ಸಿರಿಗನ್ನಡ ವೇದಿಕೆಯಿಂದ ಗುರುಕುಲ ತಿಲಕ ಪ್ರಶಸ್ತಿ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಕವಿ ಕಾವ್ಯ ಸಂಭ್ರಮ ದಲ್ಲಿ ಯುಗಪುರುಷ ಅವರ‍್ಡ್ 2022ಸೇರಿದಂತೆ ಹಲವು ರಾಜ್ಯ ಪ್ರಶಸ್ತಿ ಗಳು ಲಭಿಸಿವೆ.ಗೈಡ್ಸ್ ಲಾಂಗ್ ರ‍್ವಿಸ್ ಅವರ‍್ಡ್ ,ಯೋಗಭೂಷಣ,ಗಪ್ರಶಸ್ತಿ ಪಡೆದಿರುತ್ತಾರೆ.

ವೇದಿಕೆಯಲ್ಲಿ ಡಾ.ಎಂ.ಎಸ್ ನರಸಿಂಹಮರ‍್ತಿ ಹಾಸ್ಯ ಲೇಖಕರು, ಶ್ರೀ ನಾಗೇಶ್ ಬಿ ಅಧ್ಯಕ್ಷ ರು ಜಾಗೃತಿ ಟ್ರಸ್ಟ್,ಡಾ.ಭಾಗೀರಥಿ ಡಿ.ಎಸ್ ಸಮಾಜಸೇವಕಿ,ಡಾ.ಶೇಖರ್ ಅಜೆಕಾರು ಬೆಳದಿಂಗಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷ ರು,ಶ್ರೀ ಲಿಂಗರಾಜ ಅರಸು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ರು ,ಶ್ರೀ.ಬಿ.ಧನಪಾಲ ಕನ್ನಡ ಪರ ಹೋರಾಟಗಾರರು ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.