ಮಂಗಳೂರು : ಸಾಮೂಹಿಕವಾಗಿ ಸೂರ್ಯಗ್ರಹಣ ವೀಕ್ಷಣೆ

ಎಡ್ ವಿದೌಟ್ ರಿಲೀಜನ್ ಆಂಡ್ ಟ್ರಸ್ಟ್( ರಿ), ಮತ್ತು ದಕ್ಷಿಣ ಕನ್ನಡ ವಿಚಾರವಾದಿಗಳ ಅಸೋಸಿಯೇಷನ್ ಇದರ ಆಶ್ರಯದಲ್ಲಿ ಇಂದು 25-10-2022 ಮಂಗಳೂರು ನಗರದ ಲೇಡಿಹಿಲ್ ಬಳಿ ಸಾಮೂಹಿಕವಾಗಿ ಸೂರ್ಯಗ್ರಹಣವನ್ನು ವೀಕ್ಷಿಸಲಾಯಿತು.



ಗ್ರಹಣದ ಸಮಯ ಆಹಾರ ಸೇವನೆ ಮಾಡುವುದರಿಂದ ಮನುಷ್ಯನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂಬ ಮೂಢನಂಬಿಕೆಯ ವಿರುದ್ಧ ವೈಜ್ಞಾನಿಕ ಮನೋಭಾವನೆ ಬೆಳೆಸುವ ಸಲುವಾಗಿ ವಿಚಾರವಾದಿ ವೇದಿಕೆಯ ಕಾರ್ಯಕರ್ತರು ಸಾರ್ವಜನಿಕವಾಗಿ ಆಹಾರಗಳನ್ನು ಸೇವಿಸಿ ಗ್ರಹಣವನ್ನು ಸಂಭ್ರಮಿಸಿದರು. ಕಾರ್ಯಕ್ರಮದ ನೇತೃತ್ವವನ್ನು ವಿಚಾರವಾದಿ ವೇದಿಕೆಯ ಮುಖಂಡರಾದ ಪ್ರೋ ನರೇಂದ್ರ ನಾಯಕ್, ಪ್ರಭಾಕರ್ ಕಾಪಿಕಾಡ್ ವಹಿಸಿದ್ದರು. ಡಿವೈಎಫ್ಐ ಮುಖಂಡ ಸಂತೋಷ್ ಬಜಾಲ್ ವಿವೇಕ್, ಮಯೂರ್, ಡಿವೈಎಫ್ಐ ಮುಖಂಡರಾದ ಪ್ರಮೀಳಾ ಶಕ್ತಿನಗರ, ಅಸುಂತ, ಆಶಾ ಬೋಳೂರು, ಪ್ರಮಿಳಾ ದೇವಾಡಿಗ, ಎಸ್ಎಫ್ಐ ಜಿಲ್ಲಾ ಮುಖಂಡ ರೇವಂತ್ ಕದ್ರಿ ಮುಂತಾದವರು ಉಪಸ್ಥಿತರಿದ್ದರು.
