ಶ್ರೀ ಮಹಾವೀರ ಕಾಲೇಜು ತುಳುನಾಡ ಸಿರಿ-2022

ಮೂಡುಬಿದಿರೆ : ತುಳು ಲಿಪಿ, ಭಾಷೆ ಕಲಿಕೆಗೆ ಪಿಯು ಅಂತದಲ್ಲೂ ಅವಕಾಶ ಕಲ್ಪಿಸಲು ಸತತ ಹೋರಾಟ ನಡೆಸಲಾಗುತ್ತಿದೆ. ಅಧಿಕಾರಿಗಳು ಮನಸ್ಸು ಮಾಡಿದರೆ ಈ ಹಂತದಲ್ಲೂ ನಾವು ಯಶಸ್ವಿಯಾಗಲು ಸಾಧ್ಯ ಕರ್ನಾಟಕ ಸರ್ಕಾರದ ಪ್ರಯತ್ನದಿಂದಾಗಿ ರಾಜ್ಯ, ರಾಷ್ಟ್ರ ಮನ್ನಣೆ ಲಭಿಸಿದೆ. ತುಳು ಭವನ ನಿರ್ಮಾಣಕ್ಕಾಗಿ ಯಡಿಯೂರಪ್ಪ ಸರ್ಕಾರ 2 ಕೋಟಿ ನೀಡಿದ್ದರೆ ಬೊಮ್ಮಾಯಿ ಸರ್ಕಾರ 4,4 ಕೋಟಿ ಒದಗಿಸಿದ್ದು, ಅಕ್ಟೋಬರ್ 8ರಂದು ಬಹುನಿರೀಕ್ಷೆಯ ಹುಳು ಹುಳುವನ ಉದ್ಘಾಟನೆಗೊಳ್ಳಲಿದೆ’ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ದಯಾನಂದ ಜಿ, ಕತ್ತಲ್ ಸಾರ್ ಹೇಳಿದರು.

ಶ್ರೀ ಮಹಾವೀರ ಕಾಲೇಜು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಇವುಗಳ ಸಹಭಾಗಿತ್ವದಲ್ಲಿ ಮಹಾವೀರ ಕಾಲೇಜಿ ನಲ್ಲಿ ಮಂಗಳವಾರ ನಡೆದ ಸುಳುನಾಡ ಸಿರಿ-2022: ತುಳು ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ಮತ್ತು ತುಳು ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೃತಿ ಬಿಡುಗಡ

ಕಾಲೇಜಿನ ಹಳೆ ವಿದ್ಯಾರ್ಥಿ, ಮಂಗಳೂರು ವಿ.ವಿ. ನಿವೃತ್ತ ಉಪಕುಲಸಚಿವ ಡಾ. ಪ್ರಭಾಕರ ನೀರುಮಾರ್ಗ, ಅವರ 28ನೇ ಕೃತಿ ತುಳು ಬದುಕು” ಪ್ರಸ್ತಕವನ್ನು ಮಾಡಿ ಸಚಿವ, ಮಹಾವೀರ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕೆ.ಅಭಯಚಂದ್ರ ಜೈನ್ ಬಿಡುಗಡೆಗೊಳಿಸಿದರು, ಮೂಡುಬಿದಿರೆಯ ವೀರಪ್ಪ ಮೈಲಿ ನಮಗೆ ತುಳು ಅಕಾಡೆಮಿ ಕೊಟ್ಟರು. ತುಳುವರೇ ಸಂಸದರಾಗಿ, ಮೂರು ಬಾರಿ ಆಯ್ಕೆಯಾಗಿದ್ದರೂ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರೂ ಇನ್ನೂ ಈ ಪರಿಚ್ಛೇದಕ್ಕೆ ಸೇರಿಸಲಾಗಿಲ್ಲ. ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಲು ಇವರೆಲ್ಲರೂ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.

ಡಾ. ಪ್ರಭಾಕರ ನೀರುಮಾರ್ಗ ಅವರನ್ನು ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿ, ದ.ಕ ಹಾಲು ಉತ್ಪಾದಕರ ಸಹಕಾರಿ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಕೃತಿಕಾರ ಡಾ. ಪ್ರಭಾಕರ ನೀರುಮಾರ್ಗ, ಅಳ್ವಾನ್‍ನ ಅಧ್ಯಾಪಕ ಈ. ಯೋಗೀಶ್ “ರೋಡಿ ಕೃತಿಯ ವಿಶೇಷನ ಕುರಿತು ಮಾತನಾಡಿದರು. ವಿಚಾರ ಸಂಕಿರಣ: ಚಿತ್ರಪಟಿ, ನಿರ್ಮಾಪಕ ತಮ್ಮಣ್ಣ ಶೆಟ್ಟಿ ಅವರು ತುಳು ಸಂಸ್ಕೃತಿಯನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿ, ‘ದೈವಾರಾಧನೆ’ ಕುರಿತು ಮಾತನಾಡಿದರು. ”ತುಳುನಾಡಿನ, ಆಹಾರ ಪದ್ಧತಿಯ ಬಗ್ಗೆ ಹಳೆ ವಿದ್ಯಾರ್ಥಿ, ಪತ್ರಕರ್ತ ಧನಂಜಯ ಮೂಡುಬಿದಿರೆ ವಿಚಾರ ಪ್ರಸ್ತುತಪಡಿಸಿದರು.

ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಸಂಪತ್ ಸಾಮ್ರಾಜ್ಯ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ್ ಬಿ., ಪದವಿ ಕಾಲೇಗಿನ ಪ್ರಾಂಶುಪಾಲ ರಾಧಾಕೃಷ್ಣ, ಪಿಯು ಕಾಲೇಜಿನ ಪ್ರಾಂಶುಪಾಲ ರಮೇಶ್ ಭಟ್ , ತುಳು ಸಂಘದ ಕಾರ್ಯದರ್ಶಿ ದೇವಿ ಪ್ರಸಾದ್, ವಿದಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕಿಶನ್, ವಿದ್ಯಾರ್ಥಿ ಸಂಯೋಜಕರಾದ ಗುರುಪ್ರಸಾದ್, ರಕ್ಷಿತ್, ಪ್ರಶಾಂತ್, ವಿಕಾಸ್ ಮತ್ತು ಮೇಘ ಉಪಸ್ಥಿತರಿದ್ದರು. ಕಾಲೇಜಿನ ಗ್ರಂಥಾಲಯದಲ್ಲಿ ತುಳು ಪುಸ್ತಕಗಳ ಪ್ರದರ್ಶನ, ವಿಠಲ ನಾಯಕ್ ಕಲ್ಲಡ್ಕ ಮತ್ತು ತಂಡದವರಿಂದ ‘ತುಳು ಗೀತಾ ಸಾಹಿತ್ಯ ಸಂಭ್ರಮ ಏರ್ಪಡಿಸಲಾಗಿತ್ತು.ಕಾಲೇಜಿನ ತುಳು ಸಂಘದ ಸಂಯೋಜಕಿ, ಮುಖ್ಯ ಗ್ರಂಥ ಪಾಲಕಿ ನಳಿನಿ ಸ್ವಾಗತಿಸಿ, ಅಪೂರ್ವ ನಿರೂಪಿಸಿ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಪೆÇ್ರ. ಹರೀಶ್ ವಂದಿಸಿದರು.

Related Posts

Leave a Reply

Your email address will not be published.