ಶೂದ್ರ ಶಿವ ನಾಟಕಕ್ಕೆ ಚಾಲನೆ, ರುದ್ರ ಥೇಟರ್ ಪ್ರಸ್ತುತ ಪಡಿಸಿದ ನಾರಾಯಣ ಗುರುಗಳ ಇತಿಹಾಸ ಬಿಂಬಿಸುವ ನಾಟಕ

ಮಂಗಳೂರಿನ ರುದ್ರ ಥೇಟರ್ ಪ್ರಸ್ತುತ ಪಡಿಸಿದ ಶೂದ್ರ ಶಿವ ನಾಟಕದ ಪಥಮ ಪ್ರದರ್ಶನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಸಭಾಂಗಣದಲ್ಲಿ ರವಿವಾರ ನಡೆಯಿತು. ಶೂದ್ರ ಶಿವ ನಾಟಕದ ಪ್ರಥಮ ಪ್ರದರ್ಶನವನ್ನು ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಿದ್ಧಾಂತವನ್ನು ಪರಿಚಯಿಸುವ ಈ ನಾಟಕವನ್ನು ಖ್ಯಾತ ಯುವ ನಿರ್ದೇಶಕ ವಿದ್ದು ಉಚ್ಚಿಲ್ ಅವರು ನಿದೇರ್ಶನ ಮಾಡಿದ್ದಾರೆ. ಬಾಬು ಶಿವ ಪೂಜಾರಿ ಅವರ ಶ್ರೀ ನಾರಾಯಣ ಗುರು ವಿಜಯ ದರ್ಶನ ಕೃತಿಯನ್ನು ಮೂಲ ಪ್ರೇರಣೆಯಾಗಿಟ್ಟುಕೊಂಡು ಶೂದ್ರ ಶಿವ ನಾಟಕ ರಚಿಸಲಾಗಿದೆ.

ನಾಟಕದ ಪ್ರಥಮ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ನಿದೇರ್ಶಕ ವಿಜಯ ಕುಮಾರ್ ಕೊಡಿಯಾಲಬೈಲ್ , ಮಾಲತಿ ಜನಾರ್ದನ ಪೂಜಾರಿ, ಉರ್ಮಿಳಾ ರಮೇಶ್ ಕುಮಾರ್ , ಎ.ಜಯರಾಜ್ , ದೇವಂದ್ರ ಪೂಜಾರಿ, ರಂಜನ್ ಬೆಳ್ಳರ್ಪಾಡಿ , ಧರ್ಮರಾಜ್ ಅಮ್ಮುಂಜೆ , ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಹಾಗೂ ನಾಟಕದ ಮಾರ್ಗದರ್ಶಕ ಪದ್ಮರಾಜ್ ಆರ್ , ನಿರ್ದೇಶಕ ವಿದ್ದು ಉಚ್ಚಿಲ, ಮನೋಜ್ ವಾಮಂಜೂರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.