ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ನರೇಶ್ಚಂದ್ ಹೆಗ್ಡೆ ನಾಮಪತ್ರ ಸಲ್ಲಿಕೆ

ಕರ್ನಾಟಕ ವಿಧಾನ ಪರಿಷತ್ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ ಜೂನ್ 3ರಂದು ಚುನಾವಣೆ ನಡೆಯಲಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ನಾಮಪತ್ರ ಸಲ್ಲಿಸಿದರು.

ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಶಿಕ್ಷಕ ಕ್ಷೇತ್ರದ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಶಿಕ್ಷಕರೂ, ಖ್ಯಾತ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞರೂ, ಸೇವಾ ಮನೋಭಾವನೆಯ ವೈದ್ಯರು, ಮಾನವೀಯ ಮುಖವುಳ್ಳ ತರುಣರೂ ಆದ ಡಾ. ನರೇಶ್ಚಂದ್ ಹೆಗ್ಡೆ ಹೆಬ್ರಿಬೀಡು ಅವರು ಸ್ಪರ್ಧಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಈ ಬಾರಿ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಯೋಗ್ಯ ಹಾಗೂ ಸಮರ್ಥ ಶಿಕ್ಷಕರೋರ್‍ವರೇ ಆಯ್ಕೆಯಾಗಬೇಕೆನ್ನುವ ಉದ್ದೇಶದಿಂದ ಸ್ಪರ್ಧಿಸುತ್ತಿದ್ದಾರೆ. ಇಂದು ಚುನಾವಣಾಧಿಕಾರಿ ಅವರಿಗೆ ಡಾ. ನರೇಶ್ಚಂದ್ ಹೆಗ್ಡೆ ಅವರು ನಾಮಪತ್ರ ಸಲ್ಲಿಸಿದರು.