ಮೂಡುಬಿದರೆ : ಆಟಿಸಂ ಥೆರಪಿ ಕೊಠಡಿ ಉದ್ಘಾಟನಾ ಸಮಾರಂಭ

75 ನೇ ಸ್ವಾತಂತ್ರ್ಯದ ಅಮ್ರತಮಹೋತ್ಸವದ ಶುಭ ದಿನದಂದು ನಮ್ಮ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಜೊತೆಗೆ ಮೂಡಬಿದ್ರಿಯ ಪ್ರಖ್ಯಾತ ವಕೀಲರಾದ ಪ್ರವೀಣ್ ಲೋಬೊ ಹಾಗೂ ವಿಜೇತ ಡೇಸಾ ದಂಪತಿಗಳ ಸುಪುತ್ರಿಯಾದ ಇವಾ ಕ್ರಿಶೆಲ್ ಲೋಬೊ ಇವರ ಪ್ರಥಮ ಪರಮ ಪ್ರಸಾದ ಸ್ವೀಕಾರದ ಸವಿನೆನಪಿಗಾಗಿ ನಮ್ಮ ಸಂಸ್ಥೆಯ ಆಟಿಸಂ ಮಕ್ಕಳಿಗಾಗಿ ಕೊಡುಗೆಯಾಗಿ ನೀಡಿದ ಎಲ್ಲಾ ಸೌಕರ್ಯಗಳನ್ನೊಳಗೊಂಡ ಆಟಿಸಂ ಥೆರಪಿ ಕೊಠಡಿಯ ಉದ್ಘಾಟನಾ ಕಾರ್ಯಕ್ರಮವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು ಮೂಡಬಿದ್ರಿ ವಲಯದ ಧರ್ಮಗುರುಗಳಾದ ವಂದನೀಯ ರೆ। ಫಾ; ಒನಿಲ್ ಡಿಸೋಜಾ ಇವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು .ಹೊಸಬೆಟ್ಟು ಚರ್ಚಿನ ಧರ್ಮಗುರುಗಳಾದ ವಂದನೀಯ ರೆ।ಫಾ; ಗ್ರೆಗೋರಿ ಡಿಸೋಜಾ ಆಶೀರ್ವದಿಸಿದರು.ಮುಖ್ಯ ಅತಿಥಿಗಳಾಗಿ ದಾನಿಗಳಾದ ಪ್ರವೀಣ್ ಲೋಬೊ ಮತ್ತು ವಿಜೇತ ಡೇಸಾ ದಂಪತಿಗಳು ಇವರ ಸುಪುತ್ರಿ ಇವಾ ಕ್ರಿಶೆಲ್ ಲೋಬೊ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಸ್ರಕಾಶ್ ಜೆ ಶೆಟ್ಟಿಗಾರ್ ಉಪಸ್ಥಿತರಿದ್ದರು ಇವಾ ಕ್ರಿಶೆಲ್ ಲೋಬೊ ಆಟಿಸಂ ಥೆರಪಿ ಕೊಠಡಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು ಈ ಕಾರ್ಯಕ್ರಮದಲ್ಲಿ ಇವರ ಕುಟುಂಬಸ್ಥರು, ವಿಶೇಷ ಮಕ್ಕಳು ಹಾಗೂ ಮಕ್ಕಳ ಪೋಷಕರು ಭಾಗವಹಿಸಿದ್ದರು ಸಭಾ ಕಾರ್ಯಕ್ರಮದ ನಂತರ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು ಮಧ್ಯಾಹ್ನದ ವಿಶೇಷ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು

Related Posts

Leave a Reply

Your email address will not be published.