ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 14ನೇ ಸ್ಥಾನ: ರಶ್ಮಿತಾ ರಾಜು ಕುಲಾಲ್ ಉನ್ನತ ವ್ಯಾಸಂಗಕ್ಕೆ ಪ್ರತಿಷ್ಠಾನದಿಂದ 25 ಸಾವಿರ ನೆರವು

ಮಂಗಳೂರು: ಕರ್ನಾಟಕದ ರಾಜ್ಯದ ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ 14ನೇ ರಾಂಕ್ ಮತ್ತು ಮಂಗಳೂರಿಗೆ 6ನೇ ರಾಂಕ್ ಗಳಿಸಿರುವ ಕುಮಾರಿ ರಶ್ಮಿತಾ ರಾಜು ಕುಲಾಲ್ ಇವರ ಉನ್ನತ ವ್ಯಾಸಾಂಗಕ್ಕೆ ಕುಲಾಲ ಪ್ರತಿಷ್ಠಾನ ಮಂಗಳೂರು ಇದರು ವತಿಯಿಂದ ಸುಮಾರು 25 ಸಾವಿರವನ್ನು ನೆರವನ್ನು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯ ಯಾನೆ ಕುಲಾಲರ ಮಾತೃ ಸಂಘದಲ್ಲಿ ನೀಡಲಾಯಿತು.
ಕುಲಾಲ ಪ್ರತಿಷ್ಠಾನದ ಸಮಾಜ ಕಲ್ಯಾಣ ಆಶ್ರಯದಲ್ಲಿ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗೆ ಸಹಕಾರವನ್ನು ನೀಡುವ ಉದ್ದೇಶದಿಂದ ನಿರಂತರ ಕುಲಾಲ ಸಮಾಜದ ಬಂಧುಗಳಿಗೆ ಸಹಕಾರವನ್ನು ನೀಡುತ್ತಾ ಬರುತ್ತಿದೆ. ಜಿಲ್ಲಾ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್ ಅವರ ಉಪಸ್ಥಿತಿಯಲ್ಲಿ. ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಸುರೇಶ್ ಕುಲಾಲ್ ಮಂಗಳದೇವಿ ಟ್ರಸ್ಟಿಗಳಾದ ಪ್ರೇಮಾನಂದ ಕುಲಾಲ್. ದಿನೇಶ್ ಕುಲಾಲ್ ಇವರು ನೆರವನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮುಂಡರಿಕ್ಷ ಕುಲಾಲ್. ನ್ಯಾಯವಾದಿ ಕುಶಲಪ್ಪ. ಶ್ರೀ ದೇವಿ ದೇವಸ್ಥಾನದ ಅಧ್ಯಕ್ಷರಾದ ಸದಾಶಿವ ಕುಲಾಲ್ ಅತ್ತಾವರ.
ಕುಲಶೇಖರ :ಶ್ರೀ ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಕುಲಾಲ್ ಶಕ್ತಿನಗರ. ದೇವಸ್ಥಾನದ ಟ್ರಸ್ಟ್ ಗಿರಿಧರ್ ಜೆ ಮೂಲ್ಯ . ಪ್ರತಿಷ್ಠಾನದ ಮಹಾದಾನಿ ಸುನಿಲ್ ಆರ್ ಸಾಲ್ಯಾನ್. ಮುಂಬೈ ಕುಲಾಲ ಸಂಘದ ಅಧ್ಯಕ್ಷ ರಘು ಮೂಲ್ಯಯವರು ರಶ್ಮಿತಾ ಕುಲಾಲ್ಅವರಿಗೆ ಶುಭ ಹಾರೈಸಿದರು