ಓಂ ಕ್ರಿಕೆಟರ್ಸ್ ಪಾವಂಜೆ ನೂತನ ಅಧ್ಯಕ್ಷರಾಗಿ ಸುಕೇಶ್ ಪಾವಂಜೆ ಆಯ್ಕೆ

ಓಂ ಕ್ರಿಕೆಟರ್ಸ್ ಪಾವಂಜೆ, ಹಳೆಯಂಗಡಿ ಇದರ ವಾರ್ಷಿಕ ಮಹಾಸಭೆಯನ್ನು ದಿನಾಂಕ 26.01.2027ನೇ ಭಾನುವಾರ ಸಂಸ್ಥೆಯ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಶ್ರೀ ಶರತ್ ರವರ ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.
ವಾರ್ಷಿಕ ವರದಿ ಮತ್ತು ಆಯವ್ಯಯದ ಮಂಡನೆಯನ್ನು ಕಿರಣ್ ರಾಜ್ ರವರು ನೆರವೇರಿಸಿ ಅನುಮೋದನೆಯನ್ನು ಪಡೆದರು.
ಮುಂದಿನ ವರ್ಷಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ನೂತನ ಅಧ್ಯಕ್ಷರಾಗಿ ಶ್ರೀ ಸುಕೇಶ್ ಪಾವಂಜೆ, ಉಪಾಧ್ಯಕ್ಷರಾಗಿ ಶ್ರೀ ಮಿಥುನ್ ಸುವರ್ಣ, ಕಾರ್ಯದರ್ಶಿಯಾಗಿ ಕಾರ್ತಿಕ್ ದೇವಾಡಿಗ, ಕೋಶಾಧಿಕಾರಿಯಾಗಿ ಕಿರಣ್ ರಾಜ್ ರವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾದ ಶ್ರೀ ಶರತ್ ರವರು ಸುಕೇಶ್ ಪಾವಂಜೆಯವರಿಗೆ ಅಧಿಕಾರ ಹಸ್ತಾಂತರವನ್ನು ನೆರವೇರಿಸಿ ಕೊಟ್ಟರು
ನೂತನ ಅಧ್ಯಕ್ಷರಾದ ಶ್ರೀ ಸುಕೇಶ್ ರವರು ಮಾತನಾಡಿ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರ ಸಹಕಾರವನ್ನು ಬಯಸಿದರು.
ಕಾರ್ಯಕ್ರಮವನ್ನು ರೋಹಿತ್ ಸನಿಲ್ ರವರು ಸ್ವಾಗತಿಸಿ, ಹರೀಶ್ ಕುಲಾಲ್ ರವರು ನಿರೂಪಿಸಿದರು