ಮುಡಿಪುವಿನ ಸೂರಜ್ ಪಿಯು, ಜ್ಞಾನದೀಪ ಶಾಲೆ: ಸಂಭ್ರಮದಿಂದ ನಡೆದ ಗಣರಾಜ್ಯೋತ್ಸವ

ಮುಡಿಪುವಿನ ಸೂರಜ್ ಪದವಿ ಪೂರ್ವ ಕಾಲೇಜು ಮತ್ತು ಜ್ಞಾನದೀಪ ಶಾಲೆ ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.

ವಿದ್ಯಾರ್ಥಿಗಳು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು ತೇಜಶ್ರೀ ಇವರು ಅತಿಥಿಗಳನ್ನು ಹಾಗೂ ನೆರೆದವರನ್ನು ಸ್ವಾಗತಿಸಿದರು ನಂತರ ಅತಿಥಿಗಳು ಧ್ವಜಾರೋಹಣವನ್ನು ನೆರವೇರಿಸಿದರು.

ವಿದ್ಯಾರ್ಥಿಗಳಾದ ದೀಕ್ಷಿತ ಹಾಗೂ ಪ್ರತ್ವಿಕ್ ಅವರು ಈ ದಿನದ ಮಹತ್ವವನ್ನು ತಿಳಿಸಿದರು.
ನಂತರ ಅತಿಥಿಗಳು ಕಾರ್ಯಕ್ರಮದ ಮತ್ತು ಭಾರತ ಸಂವಿಧಾನದ ಬಗ್ಗೆ ಒಂದೆರಡು ಮಾತುಗಳನ್ನಾಡಿದರು.

ಕಾಲೇಜಿನ ಪ್ರಾಂಶುಪಾಲರದ ರಕ್ಷಿತ್ ಕುಲಾಲ್ ಇವರು ಭಾರತ ಸಂವಿಧಾನದ ಬಗ್ಗೆ ಮತ್ತು ಸಂವಿಧಾನ ಏಕೆ ಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮಕ್ಕೆ ಅತಿಥಿಯಾಗಿ ಕೆ. ದೇವದಾಸ ಭಂಡಾರಿ ಆಗಮಿಸಿದ್ದರು ಹಾಗೂ ಕಾಲೇಜಿನ ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್ ಇವರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ತೇಜಸ್ವಿನಿ ಇವರು ನಿರೂಪಿಸಿ ವಂದನಾ ಇವರು ಧನ್ಯವಾದ ಸಲ್ಲಿಸಿದರು.

Related Posts

Leave a Reply

Your email address will not be published.