ಬೈಂದೂರು: ವಿಕಸಿತ ಭಾರತ ಸಂಕಲ್ಪ ಅಭಿಯಾನ

ವಿಕಸಿತ ಭಾರತ ಸಂಕಲ್ಪ ಅಭಿಯಾನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್, ಕಿರಿಮಂಜೇಶ್ವರ ಕೆನರಾ ಬ್ಯಾಂಕ್ ನಾವುಂದ ಇವರ ಸಹಯೋಗದೊಂದಿಗೆ ವಿಕಸಿತ ಭಾರತ ಸಂಕಲ್ಪ ಅಭಿಯಾನ ಕಾರ್ಯಕ್ರಮ ನಾಗೂರಿನ ಒಡೆಯರ ಮಠ ಗೋಪಾಲಕೃಷ್ಣ ಕಲಾ ಮಂದಿರದಲ್ಲಿ ನಡೆಯಿತು.

ಶಾಸಕರಾದ ಗುರುರಾಜ ಗಂಟಿಹೊಳೆ ಅವರು ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಮಾಹಿತಿ ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಬೇಕು, ಪ್ರತಿಯೊಬ್ಬರ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಿರಿಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷರಾದ ಶೇಖರ್ ಖಾರ್ವಿಯವರು ಮಾತನಾಡಿ, ಸರಕಾರ ಹಾಕಿಕೊಂಡಂತಹ ಕೆಲವೊಂದು ಯೋಜನೆಗಳು ಜನಸಾಮಾನ್ಯರಿಗೆ ಮುಟ್ಟುವುದಿಲ್ಲ ಇದೇ ಉದ್ದೇಶದಿಂದ ಪ್ರಧಾನಿ ಮೋದಿಯವರು ಇಂಥದೊಂದು ಅದ್ಭುತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ ಎಂದರು.

ಆಧುನಿಕ ಡ್ರೋನ್ ತಂತ್ರಜ್ಞಾನದ ಮೂಲಕ ಮೂಲಕ ಕೀಟನಾಶಕವನ್ನು ಸಿಂಪಡಿಸುವುದು ಹೇಗೆ ಎಂದು ಪ್ರಾಯೋಗಿಕ ಪ್ರಾತ್ಯಕ್ಷಿಕೆ ತೋರಿಸುವ ಮೂಲಕ ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಬರುತ್ತಿದ್ದು ೬ ಲಕ್ಷ ಹಳ್ಳಿಗಳು ಈ ತಂತ್ರಜ್ಞಾನದ ಪ್ರಯೋಜನ ಪಡೆಯಲು ಯಶಸ್ವಿಯಾಗಿದೆ.

ಈ ಸಂದರ್ಭದಲ್ಲಿ ಶ್ರೀಮತಿ ಮೀರಾ ಆರ್ಥಿಕ ಸಮಾಲೋಚಕರು ಲೀಡ್ ಬ್ಯಾಂಕ್ ಕೆನರಾ ಬ್ಯಾಂಕ್, ಡಾ. ಜಯಪ್ರಕಾಶ್ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಶ್ರೀಮತಿ ಸುಜನ ಮಾಲಾ,ಆರೋಗ್ಯ ಮಿತ್ರ, ಜಿಲ್ಲಾ ಆಸ್ಪತ್ರೆ ಉಡುಪಿ, ಕರುಣಾಕರ್ ಜೈನ್ ಉಪನ್ಯಾಸಕರು ರುಡ್ ಸೆಟ್ ಬ್ರಹ್ಮಾವರ, ಕುಮಾರಿ ಅನುಷಾ ಕೃಷಿ ಇಲಾಖೆ ಬೈಂದೂರು, ಶ್ರೀ ಜೀವನ್ ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಅಂಚೆ ಇಲಾಖೆ, ಎಡ್ವಿನ್ ಸೆಬಾಸ್ಟಿಯನ್ ಕೆನರಾ ಬ್ಯಾಂಕ್ ಮ್ಯಾನೇಜರ್ ಇವರೆಲ್ಲ ತಮ್ಮ ಇಲಾಖೆಯ ವಿವಿಧ ಯೋಜನೆಗಳ ಕುರಿತು ಹಾಗೂ ಅದರ ಸದುಪಯೋಗ ಪಡೆದುಕೊಳ್ಳುವಂತೆ ಜನಸಾಮಾನ್ಯರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಮಾನ್ಯ ಶಾಸಕರು ವಿಕಸಿತ ಭಾರತದ ಮಾಹಿತಿ ಪುಸ್ತಕ ಮತ್ತು ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. P.ಒ.ಇ.ಉ.ಙ ಯೋಜನೆಯಡಿ ಸಾಲ ಪಡೆದುಕೊಂಡ ಫಲಾನುಭವಿಗೆ ಸಾಲ ಪತ್ರ ವಿತರಿಸಲಾಯಿತು. ಅಂತಿಮವಾಗಿ ಪ್ರಧಾನಿ ಭಾಷಣ ಮತ್ತು ಯೋಜನೆಗಳ ಮಾಹಿತಿಯನ್ನೊಳ ಗೊಂಡ ವಿಡಿಯೊ ಪ್ರದರ್ಶನದೊಂದಿಗೆ ಕಾರ್ಯಕ್ರಮ ನಡೆಯಿತು. ಪಿ.ಡಿ.ಓ ರಾಜೇಶ್, ಸ್ವಾಗತಿಸಿದರು. ರೂಪ ಬಿ.ವಿ ನಿರೂಪಿಸಿದರು.
ಚಂದ್ರ ಶೆಟ್ಟಿ ವಂದಿಸಿದರು.

Related Posts

Leave a Reply

Your email address will not be published.