ಸುಳ್ಯ:ಗೂನಡ್ಕ ತೆಕ್ಕಿಲ್ ಪ್ರೌಢಶಾಲೆಗೆ ಅಭಿನಂದನಾ ಸ್ಮರಣಕ್ಕೆ ನೀಡಿ ಗೌರವ
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು,ಶಿಕ್ಷಣಾಧಿಕಾರಿ ಹಾಗೂ ಪದನಿಮಿತ್ತ ತಾಲೂಕು ಯೋಜನಾಧಿಕಾರಿ ಕಚೇರಿ ಸುಳ್ಯ. ಸುಳ್ಯ ತಾಲೂಕು ಮಟ್ಟದ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನೋತ್ಸವ “ಶಿಕ್ಷಕರ ದಿನಾಚರಣೆ 2024” ರ ಈ ಸಮಾರಂಭದಲ್ಲಿ 2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೇಕಡ 100 ಫಲಿತಾಂಶ ದಾಖಲಿಸಿದ ತೆಕ್ಕಿಲ್ ಪ್ರೌಢಶಾಲೆ ಗೂನಡ್ಕ ಬೀಜದಕಟ್ಟೆ, ಸಂಸ್ಥೆಗೆ ಅಭಿನಂದನಾ ಸ್ಮರಣಕ್ಕೆ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸನ್ಮಾನ್ಯ ಶ್ರೀ ಸದಾನಂದ ಮಾವಜಿ (ಅಧ್ಯಕ್ಷರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ),ಸನ್ಮಾನ್ಯ ಶ್ರೀ ಚಂದ್ರಶೇಖರ ಪೆರಾಲು(ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ಸುಳ್ಯ), ಬಿ.ಇ ರಮೇಶ್( ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸುಳ್ಯ.) ಮತ್ತು ಶ್ರೀಮತಿ ಶೀತಲ್ ಯುಕೆ (ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗಳು,ಸುಳ್ಯ) ಇನ್ನು ಮುಂತಾದ ಗಣ್ಯರು ಉಪಸ್ಥಿತರಿದ್ದರು.