ಮೂಡುಬಿದಿರೆ: ಪೊಲೀಸ್ ವಸತಿಗೃಹಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಶಿಲಾನ್ಯಾಸ

ಮೂಡುಬಿದಿರೆ: ತಾಲೂಕಿನ ಪೊಲೀಸ್ ಠಾಣೆಯ ಆವರಣದಲ್ಲಿ ಸುಮಾರು ನಾಲ್ಕು ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪೊಲೀಸ್ ವಸತಿಗೃಹಕ್ಕೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.

ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕೋಟ್ಯಾನ್ ಅವರು ನಾಲ್ಕು ಕೋ.ವೆಚ್ಚದ ಮೂರು ಅಂತಸ್ತಿನಲ್ಲಿ ಒಟ್ಟು 12 ವಸತಿಗೃಹಗಳು ನಿರ್ಮಾಣವಾಗಲಿದ್ದು ಪೊಲೀಸ್ ಕುಟುಂಬಕ್ಕೆ ಸಹಕಾರಿಯಾಗಲಿದೆ,ಮುಂದೆ ಹಂತಹಂತವಾಗಿ ಪೊಲೀಸರ ಬೇಡಿಕೆಯಂತೆ ವಸತಿಗೃಹಗಳಿಗೆ ಆದ್ಯತೆ ನೀಡಲಾಗುವುದು,ಪೊಲೀಸ್ ಸಿಬ್ಬಂದಿಗಳ ಕೊರತೆ ಬಗ್ಗೆಯೂ ವಿಧಾನಸಭಾಧಿವೇಶನದಲ್ಲಿ ಪ್ರಸ್ತಾಪಿಸಿರುವುದಾಗಿ ಉಮಾನಾಥ ಕೋಟ್ಯಾನ್ ತಿಳಿಸಿದರು.

ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮಾತನಾಡಿ ಪೊಲೀಸ್ ಠಾಣೆಯ ಸಿಬಂದಿಗಳಿಗೆ ಪೊಲೀಸ್ ವಸತಿ ಗೃಹದ ಅಗತ್ಯವಿತ್ತು. ಕಳೆದ 15 ವರ್ಷಗಳಿಂದ ಮನವಿ ನೀಡುತ್ತಾ ಬಂದಿದ್ದು ಇದೀಗ 12 ವಸತಿ ಗೃಹ ಮಂಜೂರಾಗಿದೆ. ಠಾಣೆಯಲ್ಲಿ 40 ಜನ ಸಿಬಂದಿಗಳಿದ್ದಾರೆ. ಅವರಲ್ಲಿ 18 ಜನರಿಗೆ ವ್ಯವಸ್ಥೆ ಆಗಿದೆ. ನಾಲ್ಕು ಜನ ಉಪನಿರೀಕ್ಷಕರಿದ್ದು ಅವರಿಗೂ ವಸತಿ ಗೃಹದ ಅವಶ್ಯಕತೆಯಿದೆ ಮನವಿ ಸಲ್ಲಿಸಲಾಗಿದೆ. ಉಳಿದಂತೆ ಮುಂದಿನ ಹಂತದಲ್ಲಿ ಮತ್ತೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಮುಖ್ಯಾಧಿಕಾರಿ ಇಂದು ಎಂ., ‌‌ಪುರಸಭಾಧ್ಯಕ್ಷೆ ಜಯಶ್ರೀ, ಉಪಾಧ್ಯಕ್ಷ ನಾಗರಾಜ್ ಪೂಜಾರಿ, ಸದಸ್ಯರಾದ ಕೊರಗಪ್ಪ, ಸುರೇಶ್ ಪ್ರಭು,ಇಕ್ಬಾಲ್ ಕರೀಮ್, ಮುಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಎಸ್.ಐ,ಕೃಷ್ಣಪ್ಪ, ಎಸ್.ಐ.ಸಿದ್ದಪ್ಪ ನರನೂರ, ಎ.ಎಸ್ಸೈ ರಾಜೇಶ್ ಮತ್ತು ಸಿಬ್ಬಂದಿ ವರ್ಗ, ಪ್ರಮುಖರಾದ ರಾಜೇಶ್ ಕಡಲಕೆರೆ, ಕ್ಲಾರಿಯೋ,ಲಕ್ಷ್ಮಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.