ಸುಳ್ಯ ಮತ್ತು ಕಡಬ ತಾಲೂಕು ಭಾರೀ ಮಳೆ : ಜಿಲ್ಲಾಧಿಕಾರಿ ಭೇಟಿ

ನಿನ್ನೆ ಸುರಿದ ಮಳೆಯಿಂದಾಗಿ ಹಾನಿಗೊಳಗಾದ ಸುಳ್ಯ ಹಾಗೂ ಕಡಬ ತಾಲೂಕುಗಳಿಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ರಾತ್ರಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮೃತಪಟ್ಟ ಸುಬ್ರಹ್ಮಣ್ಯ ಸಮೀಪದ ಪರ್ವತಮಿಖಿ ಘಟನಾ ಸ್ಥಳಕ್ಕೂ ಜಿಲ್ಲಾಧಿಕಾರಿ ಭೇಟಿ ನೀಡಿದರು. ಅಧಿಕಾರಿಗಳು, ಸ್ಥಳೀಯಾಡಳಿತ ಅಧಿಕಾರಿಗಕಳಿಂದ ಮಾಹಿತಿ ಪಡೆದರು. ಪುತ್ತೂರು ಎಸಿ ಗಿರೀಶ್ ನಂದನ್, ತಹಶೀಲ್ದಾರ್ ಅನಂತಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ಪಿಡಿಒ ಶೇಖರ್ ಯು.ಡಿ. ಸೇರಿದಂತೆ ಅಧಿಕಾರಿಗಳು ಜತೆಗಿದ್ದರು.
