ಎ ವಿ ಜಿ ಶಾಲೆಯಲ್ಲಿ ಬೇಸಿಗೆ ಶಿಬಿರ- “ಲೌಕಿಕ ಶಿಕ್ಷಣದ ಜೊತೆಗೆ ಮಕ್ಕಳಿಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಶಿಕ್ಷಣವನ್ನು ನೀಡಿ” – ಧರ್ಣಪ್ಪ ಮೂಲ್ಯ

ಪುತ್ತೂರಿನ ಬನ್ನೂರು ಕೃಷ್ಣನಗರದ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಬೇಸಿಗೆ ಶಿಬಿರವು ಆರಂಭವಾಯಿತು. ಕುಂಟ್ಯಾನ ಶ್ರೀಸದಾಶಿವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಧರ್ಣಪ್ಪಮೂಲ್ಯ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿ ಅವರು ಮಕ್ಕಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವನ್ನು ನೀಡಿದಲ್ಲಿ ಅವರ ಬೌದ್ಧಿಕ ಮತ್ತು ಮಾನಸಿಕ ವಿಕಾಸನ ಸಾಧ್ಯ ಇಂತಹ ಶಿಬಿರಗಳು ವಿದ್ಯಾರ್ಥಿಗಳಿಗೆ ರಜಾ ಕಾಲದ ಸದುಪಯೋಗಕ್ಕೆ ಹಾಗೂ ತಮ್ಮ ಅಭಿರುಚಿಗಳನ್ನು ಹೆಚ್ಚಿಸಿಕೊಳ್ಳಲು ತುಂಬಾ ಸಹಕಾರಿ ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳು ಒಂದೇ ಕಡೆ ಸೇರಿ ಬೆರೆಯುವುದರಿಂದ ಮಕ್ಕಳಲ್ಲಿ ಸಾಮಾಜಿಕರಣವಾಗಲೂ ಸಾಧ್ಯವಿದೆ ಎಂದು ಹೇಳಿ ಶಿಬಿರಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಉದ್ಯಮಿಯಾಗಿರುವ ಶ್ರೀ ರಾಧಾಕೃಷ್ಣ ನಂದಿಲರವರು ಮಾತನಾಡಿ ಶಿಬಿರದಲ್ಲಿ ಮಕ್ಕಳು ಆಡುತ್ತಾ ಕುಣಿಯುತ್ತಾ ಕಲಿಯುತ್ತಾರೆ. ಇದರಿಂದಾಗಿ ಅವರ ಸೃಜನಶೀಲತೆ ವಿಕಾಸಗೊಂಡು ಮುಂದಿನ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು .ಶ್ರೀಮತಿ ವನಿತಾ ಅವರು ಗೌರವ ಉಪಸ್ಥಿತಿಯ ಸ್ಥಾನದಿಂದ ಮಾತನಾಡಿ ಶಿಬಿರದ ಸಂಘಟಕರಿಗೆ ಹಾಗೂ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ವಿವಿಧ ಶಾಲೆಗಳಿಂದ ಸುಮಾರು 35ಕ್ಕಿಂತಲೂ ಅಧಿಕ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.

ಸಭೆಯ ಅಧ್ಯಕ್ಷತೆಯನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣ ಗೌಡ ಕಳುವಾಜೆ ವಹಿಸಿದ್ದು ಶಿಬಿರಕ್ಕೆ ಸರ್ವ ಸಹಕಾರ ನೀಡುತ್ತಿರುವ ಪೋಷಕರು ಶಿಕ್ಷಕರು ಹಾಗೂ ದಾನಿಗಳನ್ನು ನೆನಪಿಸಿಕೊಂಡು ಶಿಬಿರಕ್ಕೆ ಶುಭ ಹಾರೈಸಿದರು.

ಶಾಲಾ ಸಂಚಾಲಕರಾದ ಎ ವಿ ನಾರಾಯಣರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಆಡಳಿತಾಧಿಕಾರಿ ಗುಡ್ಡಪ್ಪಗೌಡ ಬಲ್ಯ ,ಉಪಾಧ್ಯಕ್ಷರಾದ ಶ್ರೀ ಉಮೇಶ್ ಮಳುವೇಲು, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀಮತಿ ಸೌಮ್ಯ ಹೆಗ್ಡೆ, ಮತ್ತು ಸಂಪನ್ಮೂಲ ವ್ಯಕ್ತಿ ಶ್ರೀ ರಮೇಶ್ ಉಳಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳಿಗೆ ಆರು ದಿನಗಳ ಬೇಸಿಗೆ ಶಿಬಿರ ನಡೆಯಲಿದ್ದು, ಮಕ್ಕಳಿಗೆ ವಿವಿಧ ಆಟೋಟ ವಿಚಾರ ,ಚಿತ್ರಕಲೆ ,ಕ್ರಾಪ್ಟ್, ಶಿಶುಗೀತೆ ,ನಾಟಕ ,ಅಬಕಾಸ್ , ಎಂಬ್ರಾಯಿಡರಿ ವರ್ಕ್ ಸಹಿತ ಹಲವು ಕಲಾತ್ಮಕ ವಿಚಾರಗಳನ್ನು ಹೇಳಿಕೊಡಲಾಗುವುದು. ಶಿಬಿರದಲ್ಲಿ ಮಕ್ಕಳ ಸಂಪನ್ಮೂಲ ವ್ಯಕ್ತಿಗಳಾಗಿ ಚಿರಪರಿಚಿತರಾಗಿರುವ ರಮೇಶ್ ಉಳಾಯ, ತಾರನಾಥ ಸವಣೂರು ,ಚರಣ್ ಕುಮಾರ್ , ವಿದ್ಯಾಶ್ರೀ ಎಸ್, ದಿನೇಶ್ ಎಂಪಿ , ನಿಕಿತಾ ಪಾಣಾಜೆ ಅವರು ಭಾಗವಹಿಸಲಿದ್ದಾರೆ.

ಶಾಲಾ ಶಿಕ್ಷಕಿ ಶ್ರೀಮತಿ ಹರ್ಷಿತ ಪ್ರಾರ್ಥಿಸಿದರು . ಪ್ರಾಂಶುಪಾಲರಾದ ಶ್ರೀ ಅಮರನಾಥ್ ಸ್ವಾಗತಿಸಿ, ಉಪ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಕುಮಾರಿ ಕೆ ವಂದನಾರ್ಪಣೆಗೈದು, ಶಿಕ್ಷಕಿಯರಾದ ಶ್ರೀಮತಿ ರಂಜಿತ ರೈ ಮತ್ತು ಕುಮಾರಿ ಪ್ರಕ್ಷುತ ಕಾರ್ಯಕ್ರಮ ನಿರೂಪಿಸಿದರು.