ಸುರತ್ಕಲ್ :ಸುರತ್ಕಲ್‌ನಲ್ಲಿ ದೀಪಾವಳಿ ಸಂಭ್ರಮ

ಬಿಜೆಪಿ ಯುವ ಮೋರ್ಚಾ ಮಂಗಳೂರು ನಗರ ಉತ್ತರ ಮಂಡಲ ಇದರ ಆಶ್ರಯದಲ್ಲಿ ಶಾಸಕ ಡಾ. ವೈ ಭರತ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ದೀಪಾವಳಿ ಸಂಭ್ರಮ ವಿಜೃಂಭಣೆಯಿAದ ನಡೆಯಿತು. ಸುರತ್ಕಲ್ ಜಂಕ್ಷನ್‌ನಲ್ಲಿ ನಡೆದ ದೀಪಾವಳಿ ಸಂಭ್ರಮದಲ್ಲಿ ಓಂಕಾರ ಧ್ವಜ ಯಾತ್ರೆ ನಡೆಯಿತು. ಕರ್ನಾಟಕ ಸೇವಾ ವೃಂದವಾಗಿ ಸುರತ್ಕಲ್ ಆರೋಗ್ಯ ಕೇಂದ್ರದಿoದ ಮಹಾಲಿಂಗೇಶ್ವರ ಶಾಲೆಯ ಮುಂಭಾಗದಿAದ ರಾಷ್ಟಿçÃಯ ಹೆದ್ದಾರಿಯಾಗಿ ಸುರತ್ಕಲ್ ಜಂಕ್ಷನ್ ವರೆಗೆ ಓಂಕಾರ ಧ್ವಜ ಯಾತ್ರೆ ನಡೆಯಿತು.

ಇನ್ನು ಇದೇ ವೇಳೆ ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ ನಡೆಯಿತು. ಕೃಷ್ಣಾಪುರದ ಒಂದು ಕುಟುಂಬಕ್ಕೆ ಯುವ ಮೋರ್ಚಾದ ವತಿಯಿಂದ ನಿರ್ಮಾಣ ಮಾಡಿಕೊಟ್ಟ ಮನೆಯ ಕೀಲಿ ಕೈ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಗೋಪೂಜೆ, ನರಕಾಸುರ ವಧೆ, ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು.ಇದೇ ವೇಳೆ ಮಾತನಾಡಿದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಸಂಭ್ರಮದಿAದ ದೀಪಾವಳಿ ಆಚರಣೆಯನ್ನು ಮಾಡುತ್ತಿದ್ದೇವೆ ಎಂದರು.

ಇದೇ ವೇಳೆ ಕಾಂತರ ಸಿನಿಮಾದಲ್ಲಿ ಗುರುವ ಪಾತ್ರ ಮಾಡಿರುವ ನಟ ಸ್ವರಾಜ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ವಿಜಯ ಕುಮಾರ್ ಕೊಡಿಯಾಲ್ ಬ್ಯಲ್ ರಚಿಸಿ ನಿರ್ದೇಶಿಸಿದರುವ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಂಡಿತು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಭರತ್ ರಾಜ್ ಪೂಜಾರಿ, ಬಿಜೆಪಿ ಮಾಧ್ಯಮ ವಕ್ತಾರರಾದ ಜಗದೀಶ್ ಶೇಣವ, ಕಸ್ತೂರಿ ಪಂಜ, ಈಶ್ವರ್ ಕಟೀಲ್, ಮಹಾಬಲ ಪೂಜಾರಿ ಕಡಂಬೋಡಿ ಹಾಗೂ ಸಂಗಡಿಗರು ಉಪಸ್ಥಿತರಿದ್ದರು.
