ಮಾ. 1ರಿಂದ ಮಾ.5ರವರೆಗೆ ಐದು ದಿನಗಳ ಕಾಲ ನಡೆಯಲಿರುವ ಬೆಳ್ಮ ಉತ್ಸವ

ಗ್ರಾಮದಲ್ಲಿ ಸೌಹಾರ್ಧಯುತ ವಾತಾವರಣದೊಂದಿಗೆ ನಮ್ಮ ಸಂಸ್ಕøತಿ, ಆಚಾರ ವಿಚಾರಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಗ್ರಾಮೋತ್ಸವಗಳು ಪೂರಕವಾಗಿದ್ದು, ಬೆಳ್ಮ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಎಲ್ಲ ಸಂಘ ಸಂಸ್ಥೆಗಳು, ಎಲ್ಲಾ ಧರ್ಮದ ಸಂಘಟನೆಗಳನ್ನು, ಪಕ್ಷದ ಮುಖಂಡರನ್ನು ಒಟ್ಟು ಸೇರಿಸಿ ಐದು ದಿನಗಳ ಕಾಲ ನಡೆಸುವ ಬೆಳ್ಮ ಉತ್ಸವ ಕಾರ್ಯಕ್ರಮ ಇತರ ಗ್ರಾಮಗಳಿಗೆ ಮಾದರಿ ಕಾರ್ಯಕ್ರಮವಾಗಲಿದೆ ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.

ಅವರು ದೇರಳಕಟ್ಟೆಯ ಖಾಸಗಿ ಸಭಾಂಗಣದಲ್ಲಿ ಬೆಳ್ಮ ಗ್ರಾಮ ಪಂಚಾಯತ್‍ನ ಆಶ್ರಯದಲ್ಲಿ ಮಾ. 1ರಿಂದ ಮಾ.5ರವರೆಗೆ ನಡೆಯಲಿರುವ ಬೆಳ್ಮ ಉತ್ಸವದ ಸಮಾಲೋಚನಾ ಸಭೆ ಮತ್ತು ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಗ್ರಾಮೋತ್ಸವದಲ್ಲಿ ಸಾಂಸ್ಕøತಿಕ ಕ್ರೀಡೆ, ಸರಕಾರಿ ಯೋಜನೆಗಳನ್ನು ತಿಳಿಸುವ ಕಾರ್ಯ ಆಗಲಿದ್ದು, ಈ ಕಾರ್ಯಕ್ರಮ ಜಿಲ್ಲೆಗೂ ಮಾದರಿಯಾಗಿ ಎಲ್ಲಾ ಗ್ರಾಮದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಇಂತಹ ಕಾರ್ಯಕ್ರಮಗಳು ತಾಲೂಕಿನ ಎಲ್ಲಾ ಪ್ರದೇಶದಲ್ಲಿ ನಡೆಸುವಂತಾಗಬೇಕು ಎಂದರು.

ಈ ಸಂದರ್ಭದಲ್ಲಿ ಬೆಳ್ಮ ಗ್ರಾಮ ಪಂಚಾಯತ್ ಅಬ್ಬುಲ್ ಸತ್ತಾರ್ ಸಿ.ಎಂ., ಉಪಾಧ್ಯಕ್ಷೆ ರಮ್ಲತ್, ಸದಸ್ಯರಾದ ಇಕ್ಬಾಲ್ ಎಚ್. ಆರ್, ಇಬ್ರಾಹಿಂ ಬದ್ಯಾರ್, ಹನೀಫ್ ಬದ್ಯಾರ್, ಅಬ್ದುಲ್ಲಾ ಎಂ.ಎ., ರಝಾಕ್ ಕಾನೆಕೆರೆ, ವಿಜಯ ಕೃಷ್ಣಪ್ಪ ಕುಕ್ಕುದಕಟ್ಟೆ, ಪುಷ್ಪಲತಾ ರೈ, ಆಲಿಮಮ್ಮ ಬದ್ಯಾರ್, ಪಂಚಾಯತ್ ಮಾಜಿ ಅಧ್ಯಕ್ಷರಾದ ಯೂಸುಫ್ ಬಾವ, ಅಕ್ಸಾ ಉಸ್ಮಾನ್, ಮಾಜಿ ಉಪಾಧ್ಯಕ್ಷ ಹಸನಬ್ಬ ಕಾನೆಕೆರೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಗದೀಶ್ ರೈ, ಸುರೇಶ್ ಆಚಾರ್ಯ, ಕಾಂಗ್ರೆಸ್ ಮುಖಂಡ ರವಿರಾಜ್ ಶೆಟ್ಟಿ, , ಸಿ.ಎಂ. ಫಾರೂಕ್, ಸಿದ್ಧಿಕ್ ಗ್ಲ್ಯಾಡ್, ಹನೀಫ್ ದೇರಳಕಟ್ಟೆ, ಯೂತ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ರವೂಫ್ ಸಿ.ಎಂ., ಕೇಶವ ಪೂಜಾರಿ ಮುಗಿಲ, ಸೈಯ್ಯದ್ ಆಲಿ ದೇರಳಕಟ್ಟೆ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.