ಉಳ್ಳಾಲ : ಬಸ್ ಕ್ಲೀನರ್ ನಿಂದ ವೈದ್ಯೆಯೊಂದಿಗೆ ಅಸಭ್ಯ ವರ್ತನೆ

ಉಳ್ಳಾಲ: ಬೆಂಗಳೂರು ನಿಂದ ಮಂಗಳೂರಿಗೆ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕೆಗೆ ಬಸ್ ಕ್ಲೀನರ್ ವೊಬ್ಬ ಪ್ಯಾಂಟ್ ನ ಜಿಪ್ ಓಪನ್ ಮಾಡಿ ಅಸಭ್ಯವಾಗಿ ವರ್ತಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಘಟನೆ ವಿವರ: ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಕರ್ತವ್ಯ ದಲ್ಲಿರುವ ಮಹಿಳಾ ವೈದ್ಯೆಯೊಬ್ಬರು ಬೆಂಗಳೂರಿನಿಂದ ಮಂಗಳೂರಿಗೆ ಐಡಿಯಲ್ (KA51 AB 3649) ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ‌ರು. ಬಸ್ ಗುರುವಾರ ಮುಂಜಾನೆ ಉಳ್ಳಾಲ ಠಾಣಾ ವ್ಯಾಪ್ತಿಗೆ ತಲುಪೀದಾಗ ಬಸ್ ನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ಧ ಮಹಮ್ಮದ್ ಇಮ್ರಾನ್(26) ಎಂಬಾತ ಪ್ಯಾಂಟ್ ನ ಜಿಪ್ ತೆಗೆದು ಅಸಭ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ.ಈ ಬಗ್ಗೆ ಮಹಿಳಾ ವೈದ್ಯೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಉಳ್ಳಾಲ ಪೊಲೀಸರು ಆರೋಪಿ ಬಜ್ಪೆ ಕೆಂಜಾರು ನಿವಾಸಿ ಮಹಮ್ಮದ್ ಇಮ್ರಾನ್ ಎಂಬಾತನನ್ನು ಬಂಧಿಸಿದ್ದಾರೆ.

Related Posts

Leave a Reply

Your email address will not be published.