Home Posts tagged #manjeshwara (Page 4)

ಉದ್ಯಾವರ : ಅಂಡರ್ ಪಾಸ್ ನಿರ್ಮಾಣಕ್ಕೆ ಆಗ್ರಹ

ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆ ಕಾಮಗಾರಿ ನಡೆಯುತ್ತಿರುವ ಉದ್ಯಾವರದಲ್ಲಿ ಅಂಡರ್ ಪಾಸ್ ನಿರ್ಮಿಸಿ ರಸ್ತೆಯ ಇಕ್ಕೆಡೆಗಳಲ್ಲಿರುವವರಿಗೆ ಆಚೀಚೆ ದಾಟಲು ಸೌಕರ್ಯವನ್ನು ಒದಗಿಸಿ ಕೊಡಬೇಕೆಂದು ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಹಾಗೂ ಊರವರು ನಡೆಸುತ್ತಿರುವ ಪ್ರತಿಭಟನಾ ಧರಣಿಗೆ ಅಧಿಕೃತರ ಭಾಗದಿಂದ ಸ್ಪಂದನೆ ಇಲ್ಲದೇ ಇರುವ

ಮಂಜೇಶ್ವರ :ವಿದ್ಯಾರ್ಥಿಗಳ ರ್‍ಯಾಗಿಂಗ್ ವೀಡಿಯೋ ವೈರಲ್

ಮಂಜೇಶ್ವರ: ಪ್ಲಸ್ ಒನ್ ವಿದ್ಯಾರ್ಥಿಯನ್ನು ಪ್ಲಸ್ ಟು ವಿದ್ಯಾರ್ಥಿಗಳು ರ್‍ಯಾಗಿಂಗ್ ವಿಚಾರದ ವೀಡಿಯೊದಿದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲಾದ ಬೆನ್ನಲ್ಲೇ ಕೇರಳದ ಶಿಕ್ಷಣ ಸಚಿವರು ಘಟನೆಯ ಬಗ್ಗೆ ವರದಿ ಕೇಳಿದ್ದಾರೆ. ಆದಷ್ಟು ಬೇಗನೆ ತನಿಖಾ ವರದಿ ನೀಡಲು ನಿರ್ದೇಶಿಸಲಾಗಿದೆ. ಕುಂಬಳೆ ಸಮೀಪದ ಅಂಗಡಿ ಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆ ಬಿಟ್ಟ ಬಳಿಕ ನಡೆದುಕೊಂಡು ಹೋಗುತಿದ್ದ 16ರ ಹರೆಯದ ಪ್ಲಸ್ ಒನ್

ಮಂಜೇಶ್ವರ : ಪಿಎಫ್‍ಐ ಮುಖಂಡರ ಬಂಧನ ವಿರೋಧಿಸಿ ಪ್ರತಿಭಟನೆ

ಮಂಜೇಶ್ವರ: ಪಾಪ್ಯುಲರ್ ಫ್ರಂಟ್ ಮುಖಂಡರ ಬಂಧನವನ್ನು ವಿರೋಧಿಸಿ ರಾಜ್ಯ ವ್ಯಾಪಕವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರೆ ನೀಡಿರುವ ಪ್ರತಿಭಟನೆಯ ಭಾಗವಾಗಿ ಮಂಜೇಶ್ವರ ವ್ಯಾಪ್ತಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ಮಂಜೇಶ್ವರ ಭಾಗದಲ್ಲಿ ಹರತಾಳ ಬೆಂಬಲಿಗರ ಮನವಿ ಮೇರೆಗೆ ಬಹುತೇಕ ವ್ಯಾಪಾರಿಗಳು ತಮ್ಮ ಅಂಗಡಿಗಳನ್ನು ಮುಚ್ಚಿ ಸಹಕರಿಸಿದ್ದಾರೆ. ಅತ್ಯವಶ್ಯಕ ಕೆಲವೊಂದು ವಾಹನಗಳು ರಸ್ತೆಗಿಳಿಯುವುದನ್ನು ಹೊರತು ಪಡಿಸಿದರೆ ಖಾಸಗಿ ಅಥವಾ ಸರಕಾರಿ ಬಸ್ಸುಗಳು

ಅಡುಗೆ ಅನಿಲ ವಿತರಣೆಯಲ್ಲಿ ಅಕ್ರಮ ಆರೋಪ : ವೀಡಿಯೋ ವೈರಲ್

ಮಂಜೇಶ್ವರಂ: ಮಂಜೇಶ್ವರ ಹೊಸಂಗಡಿಯಲ್ಲಿ ಕಾರ್ಯಾಚರಿಸುತ್ತಿರುವ ಅನಂತ ಗ್ಯಾಸ್ ಏಜೆನ್ಸಿ ಮೂಲಕ ವಿತರಿಸಲಾಗುತ್ತಿರುವ ಅಡುಗೆ ಅನಿಲ ವಿತರಣೆಯಲ್ಲಿ ತೂಕ ಕಡಿಮೆ ಇರುವುದಾಗಿ ಆರೋಪಿಸಿ ಗ್ರಾಹಕರೊಬ್ಬರು ವೀಡಿಯೋ ಒಂದನ್ನು ವೈರಲ್ ಮಾಡಿದ ಬೆನ್ನಲ್ಲೇ ಗ್ರಾಹಕರಲ್ಲಿ ಭಾರೀ ಆತಂಕ ಸೃಷ್ಟಿಯಾಗಿತ್ತು.ಆದರೆ ಏಜನ್ಸಿ ಕಚೇರಿ ಮುಂಬಾಗದಲ್ಲಿ ಇರಿಸಲಾಗಿದ್ದ ತೂಕ ಕಡಿಮೆ ಕಂಡು ಬಂದ ಅಡುಗೆ ಅನಿಲವನ್ನು ಬೇರೆಯೇ ಇಡಲಾಗಿತ್ತೆಂದೂ ಅದನ್ನು ವಿತರಿಸುವ ಉದ್ದೇಶವಿರಲಿಲ್ಲವೆಂದೂ ಗ್ಯಾಸ್

ಮಂಜೆಶ್ವರ : ರಸ್ತೆ ಬದಿ ಕೂಲಿ ಕಾರ್ಮಿಕನ ಮೃತದೇಹ ಪತ್ತೆ

ಮಂಜೇಶ್ವರ: ಕರ್ನಾಟಕ ನಿವಾಸಿಯಾದ ಕೂಲಿ ಕಾರ್ಮಿಕನೊಬ್ಬನನ್ನು ರಸ್ತೆ ಬದಿಯಲ್ಲಿ ಗಾಯಗಳೊಂದಿಗೆ ರಕ್ತಸಿಕ್ತವಾದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಕರ್ನಾಟಕ ಬೆಳ್ಗಾಂ ನಿವಾಸಿ ಬಸಪ್ಪ ರಾಜು ಸಾವನ್ನಪ್ಪಿದ ದುರ್ದೈವಿ. ಮಂಜೇಶ್ವರ ಪಾವೂರು ಸೂಪಿ ನಗರ ರಸ್ತೆ ಬದಿಯಲ್ಲಿ ದಾರಿಹೋಕನೊಬ್ಬ ಈ ದೃಶ್ಯವನ್ನು ಕಂಡು ಮಾಹಿತಿ ನೀಡಿದ್ದಾನೆ.ಎರಡು ದಿವಸಕ್ಕೆ ಮೊದಲು ಸೂಪಿ ನಗರ ನಿವಾಸಿಯೊಬ್ಬರು ಮಂಗಳೂರಿನಿಂದ ತೋಟದ ಕೆಲಸಕ್ಕಾಗಿ ಬಸಪ್ಪ ರಾಜುನನ್ನು ಕರೆ ತಂದಿದ್ದರು. ತೋಟದ

ತಲಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ರಿಟರ್ನ್ ಹಾಲ್ ಬಿರುಕು

ಮಂಜೇಶ್ವರ: ತಲಪಾಡಿ-ಚೆಂಗಳ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ತ್ವರಿತ ಗತಿಯಲ್ಲಿ ಸಾಗುತ್ತಿರುವ ಮಧ್ಯ ತಲಪ್ಪಾಡಿಯಿಂದ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿರ್ಮಿಸಿರುವ ರಿಟರ್ನ್ ಹಾಲ್ ಬಿರುಕು ಬಿಟ್ಟಿರುವುರಾಗಿ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಯಾವುದೇ ಮಾಹಿತಿ ನೀಡದೆ ಕಾಮಗಾರಿ ಮುಂದುವರಿಸುತ್ತಿರುವ ಗುತ್ತಿಗೆದಾರರು ಬಿರುಕು ಬಿಟ್ಟಿರುವ ಬಗ್ಗೆ ಸ್ಥಳೀಯರ ಪ್ರಶ್ನೆಗಳಿಗೆ ಸ್ಪಂದಿಸದಿರುವುದು ಜನರ ಆತಂಕ ಹೆಚ್ಚಿಸಿದೆ. ರಾಷ್ಟ್ರೀಯ ಹೆದ್ದಾರಿ

ಮಂಜೇಶ್ವರ : ಸರ್ಕಾರಿ ಶಾಲೆಗೆ ಮಲೆಯಾಳ ಶಿಕ್ಷಕರ ನೇಮಕ ವಿರುದ್ಧ ಪ್ರತಿಭಟನೆ

ಮಂಜೇಶ್ವರ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮಕ್ಕೆ ಮತ್ತೆ ಮಲಯಾಳ ಶಿಕ್ಷಕರ ನೇಮಕ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ.ನೇಮಕಾತಿ ವಿರೋಧಿಸಿ ಶಾಲಾ ವಿದ್ಯಾರ್ಥಿಗಳು, , ಶಾಲಾ ರಕ್ಷಕ – ಶಿಕ್ಷಕ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕಳೆದ ವರ್ಷವೂ ಫಿಸಿಕಲ್ ಸಯನ್ಸ್ ಗೆ ಮಲಯಾಳಿ ಶಿಕ್ಷಕ ರನ್ನು ನೇಮಕ ಮಾಡಲಾಗಿತ್ತು.ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ ನೇಮಕಾತಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ

ತಲಪಾಡಿ : ಸ್ಥಳೀಯರಿಗೆ ಶಾಪವಾದ ರಸ್ತೆ ಸಮಸ್ಯೆ

ಮಂಜೇಶ್ವರ : ತಪಾಡಿಯಿಂದ ಕಾಸರಗೋಡು ತನಕದ ರಾ.ಹೆದ್ದಾರಿಯಲ್ಲಿ ಸೃಷ್ಟಿಯಾಗಿರುವ ಬೃಹತಕಾರದ ಹೊಂಡಗಳನ್ನು ಜಲ್ಲಿ ಕಲ್ಲು ಹಾಗೂ ಜಲ್ಲಿ ಹುಡಿಯನ್ನು ಹಾಕಿ ಮುಚ್ಚುತ್ತಿರುವುದು ಪ್ರಯಾಣಿಕರಿಗೂ ಸ್ಥಳೀಯರಿಗೂ ಶಾಪವಾಗಿ ಪರಿಣಮಿಸಿದೆ.ರಾಷ್ಟ್ರೀಯ ಹೆದ್ದಾರಿ ಪುನರ್ ನವೀಕರಣದ ಭಾಗವಾಗಿ ರಸ್ತೆ ನಿರ್ಮಾಣ ನಡೆಯುತ್ತಿರುವ ಭಾಗಗಳಲ್ಲಿ ಮಳೆಗಾಲದಲ್ಲಿ ಮಳೆ ನೀರು ಕಟ್ಟಿ ನಿಂತು ರಸ್ತೆ ಬಹುತೇಕ ಭಾಗಗಳಲ್ಲಿ ಕುಸಿದು ಹೋಗಿತ್ತು. ರಾ.ಹೆದ್ದಾರಿ ನಿರ್ಮಾಣದ ಕಾಮಗಾರಿಯಲ್ಲಿ ಹಲವು

ಮಂಜೇಶ್ವರ : ಶಸ್ತ್ರಾಸ್ತ್ರದೊಂದಿಗೆ ತಿರುಗಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಜೇಶ್ವರ: ಪೊಲೀಸರಿಗೆ ಲಭಿಸಿದ ಖಚಿತ ಮಾಹಿತಿಯಂತೆ ಬಂದೂಕು ಹಾಗೂ ಶಸ್ತ್ರಾಸ್ತ್ರದೊಂದಿಗೆ ಉಪ್ಪಳದಲ್ಲಿ ತಿರುಗಾಡುತಿದ್ದ ಮೂವರನ್ನು ಮಂಜೇಶ್ವರ ಎಸ್ಸೈ ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಈ ತಂಡದಲ್ಲಿದ್ದ ಪ್ರಮುಖ ಆರೋಪಿ ಅಯಾಝ್ ಎಂಬಾತನನ್ನು ಆತನ ಸಹೋದರ ಪೊಲೀಸರಲ್ಲಿ ಬಲ ಪ್ರಯೋಗಿಸಿ ಬಿಡಿಸಿರುವುದಾಗಿ ಆರೋಪಿಸಲಾಗಿದೆ. ಬಳಿಕ ಹೆಚ್ಚಿನ ಪೊಲೀಸರು ಸ್ಥಳಕ್ಕಾಗಮಿಸಿ ಆಟೋ ರಿಕ್ಷಾದಲ್ಲಿದ್ದ ಇಬ್ಬರನ್ನು ಹಾಗೂ ಆಯಾಝ್ ನ ಸಹೋದರನನ್ನು ಬಂಧಿಸಿದ್ದಾರೆ.

ಮಂಜೇಶ್ವರ ಠಾಣೆಯಲ್ಲಿ ಹುಟ್ಟುಹಬ್ಬ ಆಚರಿಸಿದ ಬಾಲಕ ಆಶಿಲ್

ಬಾಲಕನಿಗೆ ತನ್ನ ಹುಟ್ಟುಹಬ್ಬವನ್ನು ಪೊಲೀಸ್ ಠಾಣೆಯಲ್ಲಿ ಆಚರಿಸಬೇಕೆಂಬ ಮಹದಾಸೆಯನ್ನು ಮಂಜೇಶ್ವರ ಪೊಲೀಸ್ ಠಾಣೆಯ ಜನಕೀಯ ಪೊಲೀಸರು ಈಡೇರಿಸಿದ್ದಾರೆ. ವರ್ಕಾಡಿಯ ಅಝೀಝ್ ಕಲ್ಲೂರು ಹಾಗೂ ಆರಿಫಾ ದಂಪತಿಯ ಪುತ್ರನಾಗಿರುವ ಈತ. ವರ್ಕಾಡಿ ಧರ್ಮನಗರ ಮಣವಾಠಿ ಬೀವಿ ಆಂಗ್ಲಮಾಧ್ಯಮ ಶಾಲೆಯ ಯುಕೆಜಿ ವಿದ್ಯಾರ್ಥಿ ಆಶೀಲ್ ತನ್ನ 6ನೇ ವರ್ಷದ ಹುಟ್ಟುಹಬ್ಬವನ್ನು ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ ಕೇಕ್ ತುಂಡರಿಸಿ, ಸಿಹಿತಿಂಡಿ ಹಂಚಿ ಆಚರಿಸಿದನು. ತನ್ನ ಹುಟ್ಟುಹಬ್ಬವನ್ನು