ಭಾವನೆಯ ಬಂಧದಿಂದ ಧರ್ಮ ಬೆಳೆಸೋಣ : ಕೊಂಡೆವೂರು ಶ್ರೀಗಳು


ದಿ.28.09.2023 ಗುರುವಾರ ಕೊಂಡೆವೂರು ಮಠದ ಶ್ರೀ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ 20 ನೇ ಚಾತುರ್ಮಾಸ್ಯದ ಮಂಗಲೋತ್ಸವ ತದಂಗವಾಗಿ ನಡೆದ 48 ಗಂಟೆಗಳ ಅಖಂಡ ಭಜನೆಯ ಮಂಗಲ ಕಾರ್ಯಕ್ರಮಗಳು ವಿಜೃಂಭಣೆಯಿAದ ನಡೆದವು.

ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀಗಳವರು ಆಶೀರ್ವಚನಗೈಯುತ್ತಾ “ ಮಠದ ಬೆಳವಣಿಗೆಗೆ ಭಕ್ತಿ,ಜೊತೆಗೆ ಭಾವನೆಗಳ ಹೃದಯ ಬಂಧ ಕಾರಣ. ಹೆತ್ತ ಮಾತೆಯಿಂದ ಅನೇಕ ಸಜ್ಜನ ಬಂಧುಗಳ ಭಾವನಾತ್ಮಕ ಮತ್ತು ಸರ್ವ ರೀತಿಯ ನೆರವಿನಿಂದ ಅನೇಕ ಚಟುವಟಿಕೆಗಳು ಸಾಧ್ಯವಾಗಿ ಕೊಂಡೆವೂರು ಮಠವಿಂದು ಸನಾತನ ಧರ್ಮದ ಕೇಂದ್ರವಾಗಿ ಬೆಳೆಯುತ್ತಿದೆ” ಎಂದು ನುಡಿದರು.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಧಾರ್ಮಿಕ ಮುಖಂಡ ಶ್ರೀ ಕೈಯೂರು ನಾರಾಯಣ ಭಟ್, ಪ್ರಗತಿಪರ ಕೃಷಿಕ ಶ್ರೀ ದಾಮೋದರ ಭಟ್ ಉಬರಳೆ, ಉದ್ಯಮಿ ಶ್ರೀ ಶ್ರೀಧರ ಶೆಟ್ಟಿ ಮುಟ್ಟ,ಜೆಎಸ್‌ಎನ್‌ಎಂ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟಿ ಶ್ರೀ ಶಶಿಧರ ಶೆಟ್ಟಿ ಗ್ರಾಮಚಾವಡಿ, ಉದ್ಯಮಿ ಶ್ರೀ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಉದ್ಯಮಿ ಶ್ರೀ ಯು.ಎಂ.ಭಾಸ್ಕರ್ ಮತ್ತು ಶ್ರೀ ರಘು ಸಿ.ಚೆರುಗೋಳಿಯವರುಗಳು ತಮ್ಮ ಮತ್ತು ಶ್ರೀಗಳವರ ಸಂಬAಧದ ಬಗ್ಗೆ ಮನದಾಳದ ಮಾತುಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಖ್ಯಾತ ವೈದ್ಯ ಡಾ.ಶ್ರೀಧರ ಭಟ್ ರವರು ಅಧ್ಯಕ್ಷೀಯ ಭಾಷಣದಲ್ಲಿ ಶ್ರೀಮಠದ ಸನಾತನ ಧರ್ಮ ಬೆಳವಣಿಗೆಯ ಚಟುವಟಿಕೆಗಳಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು.


ಇದೇ ಸಂದರ್ಭದಲ್ಲಿ ಕಳೆದ ವರ್ಷ ಶ್ರೀಮಠದಲ್ಲಿ ನಡೆದ ಅಗ್ನಿವೀರ್ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು, ಇದೀಗ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಬಂಬ್ರಾಣದ ಅನ್ವಿತ್ ಕೆ.ವಿ.ಮತ್ತು ಕುಂಬಳೆಯ ಪ್ರತೀಕ್ ರವರುಗಳನ್ನು ಅವರ ಕುಟುಂಬ ವರ್ಗದ ಸಮ್ಮುಖದಲ್ಲಿ ಶ್ರೀಗಳು ಸನ್ಮಾನಿಸಿ ದೇಶ ಕಾಯುವ ಕಾರ್ಯಕ್ಕೆ ಶುಭ ಹಾರೈಸಿದರು.


ಕು.ಶ್ರಾವಣ್ಯ ಪ್ರಾರ್ಥನೆ, ಶ್ರೀ ಗಂಗಾಧರ ಕೊಂಡೆವೂರು ಸ್ವಾಗತ ಮತ್ತು ವಂದನಾರ್ಪಣೆಗೈದ ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ದಿನಕರ ಹೊಸಂಗಡಿ ಮಾಡಿದರು.

Related Posts

Leave a Reply

Your email address will not be published.