Home Posts tagged #manjeshwara (Page 5)

ಮಂಜೇಶ್ವರ : ನೀರಿನ ಕೊಳಕ್ಕೆ ಬಿದ್ದು ಯುವಕರಿಬ್ಬರು ಮೃತ್ಯು

ಪೆರ್ನಾಳ್ ಹಬ್ಬ ಆಚರಿಸಲೆಂದು ಸಂಬಂಧಿಕರ ಮನೆಗೆ ಬಂದಿದ್ದ ಯುವಕರಿಬ್ಬರು ಮಸೀದಿಯ ಸಮೀಪದ ಕೊಳದಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೊಗ್ರಾಲ್ ಕೊಪ್ಪಳದಲ್ಲಿ ಶನಿವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಮಂಜೇಶ್ವರ ಮಜಿಬೈಲ್ ನಿವಾಸಿ ಖಾದರ್ – ನಸೀಮಾ ದಂಪತಿಗಳ ಮಕ್ಕಳಾದ ಅಬ್ದುಲ್ ನಾಝಿಂ (22) ಹಾಗೂ ಮೊಹಮ್ಮದ್ ನವಾ (17) ಮೃತ ದುರ್ದೈವಿಗಳು.

Manjeshwara : ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಮಂಜೇಶ್ವರ ರಾಗಂ ಜಂಕ್ಷನ್ ಸಮೀಪದ ಕುನ್ನಿಲ್ ಜುಮಾ ಮಸೀದಿ ರಸ್ತೆ ಸಮೀಪದಲ್ಲಿ ವಾಸವಾಗಿರುವ ದಿವಂಗತ ಸಯ್ಯದ್ ಹಾದಿ ತಂಘಲ್ ರವರ ಪುತ್ರ ಹಮೀದ್ ತಂಘಲ್ ಎಂಬವರ ಮನೆಗೆ ಹಿಂಬಾಗದ ಬಾಗಿಲನ್ನು ಮುರಿದು ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟನ್ನು ಮುರಿದು 60 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂ. ನಗದನ್ನು ಕಳವುಗೈದಿದ್ದಾರೆ.ಹಮೀದ್ ತಂಘಲ್ ರವರು ಎರಡು ದಿವಸಕ್ಕೆ ಮೊದಲು ಕುಟುಂಬ ಸಮೇತರಾಗಿ ಏರ್ವಾಡಿಗೆ ತೆರಳಿದ್ದಾರೆನ್ನಲಾಗಿದೆ. ಗುರುವಾರ ಸಂಜೆ ಮರಳಿ ಬಂದಾಗ ಮನೆಯ

ಮಂಜೇಶ್ವರ : ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋದ ಡಾಮರು

ಮಂಜೇಶ್ವರ ಗ್ರಾಮ ಪಂಚಾಯತ್‍ನ ಎರಡನೇ ವಾರ್ಡು ವ್ಯಾಪ್ತಿಯಲ್ಲಿರುವ ತೂಮಿನಾಡು ಮಹಾಕಾಳಿ ರಸ್ತೆ, ಕಳಪೆ ಕಾಮಗಾರಿಯಿಂದ ತಿಂಗಳು ಕಳೆಯುವ ಮುನ್ನವೇ ಕಿತ್ತು ಹೋಗಿದೆ. ಕಳಪೆ ಮತ್ತು ಅರೆಬರೆ ಕಾಮಗಾರಿ ನಡೆಸಿದ ಗುತ್ತಿಗೆದಾರನ ವಿರುದ್ಧ ವ್ಯಾಪಕ ಆಕ್ರೋಶವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಮಂಜೇಶ್ವರ ಗ್ರಾಮ ಪಂಚಾಯತ್ ಫಂಡ್‍ನಿಂದ 3 ಲಕ್ಷ ರೂ. ಖರ್ಚಿನಲ್ಲಿ ನಿರ್ಮಾಣಗೊಂಡ 120 ಮೀಟರ್ ಅಂತರದ ರಸ್ತೆ ಇದೀಗ ತಿಂಗಳಾಗುವ ಮೊದಲೇ ಕಿತ್ತು ಹೋಗಿದೆ.

ತೂಮಿನಾಡು ; ಬಾವಿ ಕೆಲಸ ಮೊಟಕು ಹಿನ್ನೆಲೆ, ಸ್ಥಳೀಯರ ಆತಂಕ

ಮಂಜೇಶ್ವರ: ಮಂಜೇಶ್ವರ ಗ್ರಾಮ ಪಂಚಾಯತು ಎರಡನೇ ವಾರ್ಡು ವ್ಯಾಪ್ತಿಯ ತೂಮಿನಾಡು ಅಂಗನವಾಡಿಯ ಮುಂಭಾಗದಲ್ಲಿ ಮಂಜೇಶ್ವರ ಬ್ಲಾಕ್ ಪಂಚಾಯತು ನಿಧಿಯಿಂದ ಮಂಜೂರಾಗಿರುವ ಬಾವಿಯೊಂದರ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡು ಅದನ್ನು ಅರ್ಧದಲ್ಲೇ ಗುತ್ತಿಗೆದಾರ ಬಿಟ್ಟು ಹೋಗಿರುವುದು ಸ್ಥಳೀಯರ ಆತಂಕಗಳಿಗೆ ಕಾರಣವಾಗಿದೆ. ಬಾವಿಯನ್ನು ಅರ್ಧ ಅಗೆದು ಹಾಗೆಯೇ ಬಿಡಲಾಗಿದೆ. ಬಾಯಿ ತೆರೆದು ಕೊಂಡಿರುವ ಈ ಬಾವಿಯಲ್ಲಿ ಈಗ ನೀರಿಲ್ಲದಿದ್ದರೂ ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ

ಬಡವರ ಸಂಕಷ್ಟಗಳ ಮುಂದೆ ಗಿಮಿಕ್ ಮಾಡಿದ ಬಿಜೆಪಿಗೆ ಹೊಡೆತ : ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ

ಮಂಜೇಶ್ವರ : ಕರ್ನಾಟಕದ ವಿಧಾನಸಭಾ ಚುನಾವಣೆ ಫಲಿತಾಂಶ ಬಡವರ ಸಂಕಷ್ಟಗಳ ಮುಂದೆ ಗಿಮಿಕ್ ಮಾಡಿದ ಬಿಜೆಪಿಗೆ ಮರೆಯಲಾಗದ ಹೊಡೆತ ನೀಡಿದೆ ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದ್ದಾರೆ. ಜನರ ದೈನಂದಿನ ಸಮಸ್ಯೆಗಳಿಗೆ ಕಿವಿಗೊಡದೆ, ಚುನಾವಣಾ ಸಮಯದಲ್ಲಿ ಕರ್ನಾಟಕದ ಮಣ್ಣಿಗೆ ವಕ್ಕರಿಸಿ ವಿವಿಧ ಗಿಮಿಕ್ ಮಾಡಿ, ಜನರ ಭಾವನೆಗಳೊಂದಿಗೆ ಆಟವಾಡುವ ಮೋದಿ,ಅಮಿತ್ ಶಾ, ಯೋಗಿ ಎಂಬ ದ್ವೇಷದ ಮಾರಾಟಗಾರರಿಗೆ ಜನರು ಸರಿಯಾದ ಉತ್ತರ

ಮಂಜೇಶ್ವರದ ಕುಂಡು ಕೊಳಕೆ ಬೀಚ್‍ನಲ್ಲಿ ಸಮ್ಮರ್ ಬೀಚ್ ಉತ್ಸವ : ಮೇ 8ರಂದು ಸಮಾಪ್ತಿ

ಮಂಜೇಶ್ವರ : ಉದ್ಯಾವರ ಎಎಚ್‍ಎಸ್ ತಂಡದ ಪ್ರಾಯೋಜಕತ್ವದಲ್ಲಿ ಸಪ್ತ ಭಾಷಾ ಸಂಗಮ ಭೂಮಿಯಾದ ಮಂಜೇಶ್ವರದ ಕುಂಡು ಕೊಳಕೆ ಬೀಚ್‍ನಲ್ಲಿ ಆರಂಭಗೊಂಡ ಸೀಸನ್ 3 ಸಮ್ಮರ್ ಬೀಚ್ ಉತ್ಸವದಲ್ಲಿ ಹಿಂದೆಂಂದೂ ಕಾಣದ ವೈವಿಧ್ಯತೆ ಕಂಡು ಬರುತ್ತಿದೆ. ಇನ್ನು ಕೇವಲ 6 ದಿನಗಳು ಮಾತ್ರ ಬಾಕಿ ಉಳಿದಿದ್ದು ಇದೇ ತಿಂಗಳು ಅಂದ್ರೆ ಇದೇ ತಿಂಗಳು ಮೇ 8 ಕ್ಕೆ ಸಮ್ಮರ್ ಫೈಸ್ಟ್ ಸಮಾಪ್ತಿಗೊಳ್ಳಲಿದೆ. ಎ ಎಚ್ ಎಸ್ ತಂಡ ಈ ಸಲದ ಸಮ್ಮರ್ ಫೆಸ್ಟ್ ಗೆ ಉಚಿತ ಪ್ರವೇಶವನ್ನೇ ಊರವರ

ದಿನನಿತ್ಯ ಒಂದೊಂದು ರೀತಿಯ ತೆರಿಗೆ ವಿಧಿಸಿ ಜನರ ಮೇಲೆ ಬರೆ : ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಡಿಎಂಕೆ

ಮಂಜೇಶ್ವರ : ಎಲ್ಲವನ್ನೂ ಸರಿಪಡಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಕೇರಳದ ಎಡರಂಗ ಸರಕಾರವು ದಿನನಿತ್ಯ ಒಂದೊಂದು ರೀತಿಯ ತೆರಿಗೆಗಳನ್ನು ಹೇರಿ ಜನತೆಯನ್ನು ಸುಲಿಯುತ್ತಿದ್ದು, ಈ ತುಘಲಕ್ ಸರಕಾರ ತೊಲಗದೆ ಜನತೆ ನೆಮ್ಮದಿ ಕಾಣಲಾರರು ಎಂದು ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮುಹಮ್ಮದ್ ಡಿಎಂಕೆ ಹೇಳಿದರು. ರಾಜ್ಯ ಸರಕಾರದ ತೆರಿಗೆ ಸುಲಿಗೆ ಪ್ರತಿಭಟಿಸಿ ಯುಡಿಎಫ್ ಪೈವಳಿಕೆ ಪಂಚಾಯತ್ ಸಮಿತಿ ಆಶ್ರಯದಲ್ಲಿ ಪೈವಳಿಕೆ ಪಂಚಾಯತ್ ಕಚೇರಿ ಮುಂಭಾಗದಲ್ಲಿ

ಚುನಾವಣೆ ಹಿನ್ನೆಲೆ, ಕೇರಳ-ಕರ್ನಾಟಕ ಗಡಿಭಾಗದಲ್ಲಿ ತೀವ್ರ ತಪಾಸಣೆ

ಮಂಜೇಶ್ವರ : ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೇರಳ ಪೆÇಲೀಸರು ಕೂಡಾ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಗಡಿ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಿದ್ದಾರೆ.ಕರ್ನಾಟಕ ಭಾಗಕ್ಕೆ ವ್ಯಾಪಾರ, ಚಿಕಿತ್ಸೆ, ಶಿಕ್ಷಣ ಪ್ರವೇಶ ಸೇರಿದಂತೆ ವಿವಿದ ಉದ್ದೇಶಗಳಿಗಾಗಿ ಅನೇಕ ಜನರು ಕೇರಳದಿಂದ ಗಡಿ ದಾಟಿರವರು ಮರಳಿ ಬರುವಾಗ ದೊಡ್ಡ ಮೊತ್ತದ ಹಣ ಜೊತೆಯಾಗಿದ್ದರೆ ಸಾಕಷ್ಟು ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳ ಕೊರತೆಯಿಂದ

ಮಂಜೇಶ್ವರದಲ್ಲಿ ಸರ್ವೀಸ್ ರೋಡ್, ಅಂಡರ್ ಪಾಸ್ ವ್ಯವಸ್ಥೆ : ಪ್ರಮುಖ ಬೇಡಿಕೆ ಈಡೇರದಿದ್ದರೆ ಪ್ರತಿಭಟನೆಯ ಎಚ್ಚರಿಕೆ

ಮಂಜೇಶ್ವರ: ರಾಷ್ಟೀಯ ಹೆದ್ದಾರಿ ಎನ್.ಹೆಚ್. 66 ಅಭಿವೃದ್ಧಿಯ ಭಾಗವಾಗಿ ಹಲವೆಡೆ ಅಂಡರ್ ಪಾಸ್, ಸರ್ವಿಸ್ ರೋಡ್‍ನ ವ್ಯವಸ್ಥೆ ನೀಡಲಾಗಿದ್ದರೂ ಕೇರಳದ ಅತಿ ದೊಡ್ಡ ಎರಡನೇ ಚೆಕ್-ಪೋಸ್ಟ್ ಮಂಜೇಶ್ವರಕ್ಕೆ ಸರ್ವಿಸ್ ರೋಡ್ ಆಗಲಿ, ಅಂಡರ್ ಪಾಸ್ ಆಗಲಿ ಯಾವುದನ್ನು ನೀಡದ ಹಿನ್ನೆಲೆಯಲ್ಲಿ ಸ್ಥಳೀಯರು ಪ್ರತಿಭಟನೆಗೆ ಸಿದ್ದತೆ ನಡೆಸುತಿದ್ದಾರೆ. ಇದರ ಮೊದಲ ಹಂತವಾಗಿ ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಅವರ ಅಧ್ಯಕ್ಷತೆಯಲ್ಲಿ ಊರವರು ಗುರುನರಸಿಂಹ ಮಂಟಪದಲ್ಲಿ ಸಭೆ

ಮಂಜೇಶ್ವರದೆಲ್ಲೆಡೆ ಸಂಭ್ರಮದ ‘ಈದುಲ್ ಫಿತ್ರ್’ ಆಚರಣೆ

ಮಂಜೇಶ್ವರ: ಪವಿತ್ರ ರಂಜಾನಿನ 30 ವೃತ್ತಗಳನ್ನು ಆಚರಿಸಿ ಮಂಜೇಶ್ವರದ ವಿವಿಧ ಭಾಗಗಳಲ್ಲಿರುವ ಮುಸ್ಲಿಮರು ಅತ್ಯಂತ ಸಡಗರ ಸಂಭ್ರಮದ ಈದುಲ್ ಫಿತ್ರ್ ಆಚರಿಸಿದರು. ಮಂಜೇಶ್ವರದ ವಿವಿಧ ಮಸೀದಿ, ಈದ್ಗಾ ಗಳಲ್ಲಿ ಸಾಮೂಹಿಕ ನಮಾಜ್, ಈದ್ ಖುತ್ಬಾ, ಈದ್ ಸಂದೇಶ, ಪ್ರವಚನ, ಈದ್ ಶುಭಾಷಯ, ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಬೇಟಿಯ ಮೂಲಕ ಹಬ್ಬಕ್ಕೆ ಸಂಭ್ರಮ ತರಲಾಯ್ತು. ತೂಮಿನಾಡು ಮಸ್ಜಿದ್ ನೂರ್ ಮಸೀದಿಯಲ್ಲಿ ನಡೆದ ಪ್ರಾರ್ಥನೆಗೆ ಅಶ್ಪಾಕ್ ಮಚ್ಚಂಪ್ಪಾಡಿ ಹಾಗೂ