ಮಂಜೇಶ್ವರ: ನೆತ್ತಿಲ ಪದವು ಗೋವಿಂದ ಪೈ ರಸ್ತೆ ಕಳಪೆ ಕಾಮಗಾರಿ ಆರೋಪ

ಮಂಜೇಶ್ವರದ ನೆತ್ತಿಲ ಪದವು ಗೋವಿಂದ ಪೈ ರಸ್ತೆಯ ಮರುಡಾಮರೀಕರಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಐದು ಕೋಟಿ ರೂಪಾಯಿ ಮಂಜೂರುಗೊಂಡು ಕಾಮಗಾರಿ ನಡೆಸಲಾಗಿದೆ. ಆದರೆ, ಇದೀಗ ಕಾಮಗಾರಿಯಲ್ಲಿ ಲೋಪದೋಷಗಳು ಕಂಡುಬಂದಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಈ ಮೊದಲು ರಸ್ತೆಯು 3 ಮೀಟರ್ 80 ಸೆಂಟಿ ಮೀಟರ್ ಅಗಲವಾಗಿತು. ಆದರೆ ನೂತನವಾಗಿ ನಿರ್ಮಾಣವಾಗುವ ರಸ್ತೆ 5 ಮೀಟರ್ 80 ಸೆಂಟಿ ಮೀಟರ್ ಇರಬೇಕೆಂಬುವುದು ಸ್ಥಳೀಯರ ಬೇಡಿಕೆಯಾಗಿತ್ತು. ಆದರೆ ಈಗಾಗಲೇ ಕಾಮಗಾರಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗಲ ಮಾಡುವ ಉದ್ದೇಶವೇ ಇಲ್ಲವೆಂಬುದಾಗಿ ಇಂಜಿನಿಯರ್ ಹೇಳಿದ್ದಾರೆನ್ನಲಾಗಿದೆ.

ಇದೀಗ ಆರಂಭಗೊಂಡ ಕಾಮಗಾರಿಯಲ್ಲಿ ಕಳಪೆ ಕಾಮಗಾರಿಯ ಪ್ರದರ್ಶನವಾಗುತ್ತಿರುವುದಾಗಿಯೂ ಆರೋಪವಿದೆ. ಸ್ಥಳೀಯರ ಬೇಡಿಕೆಯಂತೆ ಮಂಜೇಶ್ವರ ಶಾಸಕ ಎಕೆಎಂ ಆಶ್ರಫ್ ಅವರು ರಸ್ತೆ ಕಾಮಗಾರಿ ನಡೆಸುವ ಸ್ಥಳಕ್ಕೆ ಭೇಟಿ ನೀಡಿದ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ, ಸಾರಿಗೆ ಸಚಿವ, ಜಿಲ್ಲಾಧಿಕಾರಿ, ಲೋಕೋಪಯೋಗಿ ಇಲಾಖೆಗೆ ಮನವಿಯನ್ನು ನೀಡಿದ್ದಾರೆ. ಸಂಬಂಧಪಟ್ಟವರು ಕೂಡಲೇ ಕಳಪೆ ಕಾಮಗಾರಿಯನ್ನು ಕೊನೆಗೊಳಿಸಿ ರಸ್ತೆಯನ್ನು ಅಗಲ ಮಾಡಿ ನಿರ್ಮಿಸಲು ಮುಂದಾಗಬೇಕಾಗಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಮಗಾರಿ ತಡೆದು ಪ್ರತಿಭಟಿಸಲಿರುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

Related Posts

Leave a Reply

Your email address will not be published.