ಮಂಜೇಶ್ವರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಎನ್‍ಆರ್ ಇಜಿ ಯೂನಿಯನ್ ನೇತೃತ್ವದಲ್ಲಿ ಪ್ರತಿಭಟನೆ
ಮಂಜೇಶ್ವರ: ಉದ್ಯೋಗ ಖಾತರಿ ಯೋಜನೆಯನ್ನು ಬುಡಮೇಲುಗೊಳಿಸುವ ಕ್ರಮವನ್ನು ಕೊನೆಗೊಳಿಸಿ, ಹೆಚ್ಚಿಸಿದ ಮಜೂರಿಯನ್ನು ಕೂಡಲೇ ವಿತರಿಸಿ, ಕಡಿತಗೊಳಿಸಿದ ಲೇಬರ್ ಬಜೆಟ್ ಪುನಸ್ತಾಪಿಸಿ ಇತ್ಯಾದಿ ಬೇಡಿಕೆಯನ್ನು ಮುಂದಿಟ್ಟುಕೊಂಡು ಎನ್‍ಆರ್‍ಇಜಿ ಯೂನಿಯನ್ ನೇತೃತ್ವದಲ್ಲಿ ಮೀಯಪದವಿನಲ್ಲಿ ಪ್ರತಿಭಟನೆ ನಡೆಸಿದರು.
ಸಭೆಯನ್ನು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ಏ. ಕರೀಂ ಉದ್ಘಾಟಿಸಿದರು. ಮೀಂಜ ಪಂಚಾಯತ್ ಸದಸ್ಯ ಜನಾರ್ಧನ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಏರಿಯಾ ಕಮಿಟಿ ಅಧ್ಯಕ್ಷೆ ಸರಸ್ವತಿ, ರಾಮಚಂದ್ರ ಟಿ., ಹಂಸ, ಐರಿನ್ ಜೋಸ್ಪಿನ್, ಚಂದ್ರಾವತಿ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.