Home Posts tagged #ullala (Page 6)

ಜೆಪ್ಪು : ನಾಲ್ಕು ವಾಹನಗಳ ಸರಣಿ ಅಪಘಾತ – ಪ್ರಯಾಣಿಕರು ಪಾರು

ಉಳ್ಳಾಲ: ಕಾರು ಚಾಲಕನೊರ್ವ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಇತರ ಮೂರು ವಾಹನಗಳು ಒಂದಕ್ಕೊಂದು ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದ ಘಟನೆ ರಾ.ಹೆ. 66ರ ಜೆಪ್ಪುವಿನ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ಸಮೀಪದಲ್ಲಿ ನಡೆದಿದ್ದು ವಾಹನದಲ್ಲಿದ್ದವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ತೊಕ್ಕೊಟ್ಟು ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ

ಮಂಗಳೂರು: ಉಳ್ಳಾಲಕ್ಕೆ ಮೂಲಸೌಕರ್ಯ ಒದಗಿಸಲು ರೋಡ್ ಮ್ಯಾಪ್, ಸ್ಪೀಕರ್ ಯು.ಟಿ. ಖಾದರ್

ಉಳ್ಳಾಲ ಕ್ಷೇತ್ರವನ್ನು ಮುಂದಿನ 30-40 ವರ್ಷಗಳ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕುಡಿಯುವ ನೀರು, ರಸ್ತೆ, ವಿದ್ಯುತ್ ಮೂಲಭೂತ ಸೌಕರ್ಯವನ್ನು ಒದಗಿಸುವ ಮೂಲಕ, ಮಂಗಳೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಸಿದ್ಧಪಡಿಸಲಾಗುವುದು ಎಂದು ವಿಧಾನ ಸಭೆಯ ಸ್ಪೀಕರ್, ಸ್ಥಳೀಯ ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ. ಅವರು ನಗರದ ಸರ್ಕ್ಯೂಟ್ ಹೌಸ್‍ನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಮಂಗಳೂರು ಕ್ಷೇತ್ರದಲ್ಲಿ ವಿದ್ಯುತ್

ಉಳ್ಳಾಲ : ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ ಯುವಕ ಆತ್ಮಹತ್ಯೆ

ಬೈಕ್ ಕಳವುಗೈದು ಉಳ್ಳಾಲ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾನೆ.ಗಾಂಜಾ ವ್ಯಸನಕ್ಕೆ ಬಲಿಯಾಗಿದ್ದ ಯುವಕ ಸೇದಲು ಗಾಂಜಾ ಸಿಗದೆ ಜಿಗುಪ್ಸೆಗೊಂಡು ಇಂದು ಬೆಳಿಗ್ಗೆ ಮನೆಯಲ್ಲಿ ಸಾವಿಗೆ ಶರಣಾಗಿದ್ದಾನೆ.ತಲಪಾಡಿ ಗ್ರಾಮದ ನಾರ್ಲ,ಪಡೀಲ್ ನಿವಾಸಿ ಪೈಝಲ್(24) ಆತ್ಮಹತ್ಯೆಗೈದ ಯುವಕ.ಫೈಝಲ್ ಇಂದು ಬೆಳಿಗ್ಗೆ ತನ್ನ ಮನೆಯ ಮೊದಲ ಅಂತಸ್ತಿನ ಕೊಠಡಿಯ ಫ್ಯಾನಿಗೆ ನೈಲಾನ್ ಬಟ್ಟೆಯಿಂದ ಕುಣಿಕೆ ಬಿಗಿದು ಆತ್ಮಹತ್ಯೆಗೈದಿದ್ದಾನೆ.ಮನೆಯಲ್ಲಿ ಫೈಸಲ್

ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿಯಿಂದ ಸ್ಪೀಕರ್ ಯುಟಿ ಖಾದರ್‍ಗೆ ಸನ್ಮಾನ

ಉಳ್ಳಾಲ: ನಮ್ಮೂರ ಸನ್ಮಾನ ಸಮಿತಿ ದೇರಳಕಟ್ಟೆ ಆಶ್ರಯದಲ್ಲಿ ಸ್ಪೀಕರ್ ಯುಟಿ ಖಾದರ್ ಅವರಿಗೆ ಸನ್ಮಾನ ಕಾರ್ಯಕ್ರಮವು ದೇರಳಕಟ್ಟೆ ಸಿಟಿ ಗ್ರೌಂಡ್‍ನಲ್ಲಿ ನಡೆಯಿತು. ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ.ಶಾಂತರಾಂ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ,ಒಬ್ಬ ಶಾಸಕನಾಗಿ, ಮಂತ್ರಿ ಆಗಿ ಜನರ ಒಳಿತಿಗಾಗಿ ಏನನ್ನು ಮಾಡಲು ಸಾಧ್ಯ ಎಂಬುದು ಖಾದರ್ ಅವರ ಮೂಲಕ ತಿಳಿದು ಕೊಳ್ಳಲು ಸಾಧ್ಯ. ಗ್ರಾಮ ಅಭಿವೃದ್ಧಿ ಆಗಲು ಸ್ಪೀಕರ್ ಯುಟಿ ಖಾದರ್ ಕಾರಣ ಎಂದು

ಉಳ್ಳಾಲ: ಬಟ್ಟಂಪಾಡಿ ಕಡಲ್ಕೊರೆತ ಸ್ಥಳ ಪರಿಶೀಲಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ

ಉಳ್ಳಾಲ ತಾಲೂಕಿನ ಬಟ್ಟಂಪಾಡಿಯ ಕಡಲ್ಕೊರೆತ ಪ್ರದೇಶಕ್ಕೆ ಕಂದಾಯ ಸಚಿವರಾದ ಕೃಷ್ಣಭೈರೇಗೌಡ ಅವರು ಭೇಟಿ ನೀಡಿ ಕಡಲ್ಕೊರೆತದ ಹಾನಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್, ಕಂದಾಯ ಇಲಾಖೆಯ ಆಯುಕ್ತ ಸುನಿಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

ಉಳ್ಳಾಲ: ಆ.27ಕ್ಕೆ ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉದ್ಘಾಟನೆ

ಉಳ್ಳಾಲ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕದ ಉದ್ಘಾಟನಾ ಸಮಾರಂಭ ಆ.27 ರಂದು ಭಾನುವಾರ ಸಂಜೆ 3.00 ಗಂಟೆಗೆ ತೊಕ್ಕೊಟ್ಟು ಅಂಬಿಕಾ ರೋಡಿನ ಗಟ್ಟಿ ಸಮಾಜ ಭವನದಲ್ಲಿ ನೆರವೇರಲಿದೆ ಎಂದು ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ್ ಎನ್.ಕೊಣಾಜೆ ಹೇಳಿದ್ದಾರೆ. ಉಳ್ಳಾಲ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ ಖಾದರ್

ಉಳ್ಳಾಲ|| ಆಧಾರ್ ಇಲ್ಲದ ವಿದ್ಯಾರ್ಥಿನಿಯರನ್ನು ಬಸ್‍ನಿಂದ ಕೆಳಗಿಳಿಸಿದ ನಿರ್ವಾಹಕ: ಸ್ಥಳೀಯರಿಂದ ತರಾಟೆ

ಉಳ್ಳಾಲ: ಆಧಾರ್ ಕಾರ್ಡ್ ಇಲ್ಲದೆ ಸರಕಾರಿ ನರ್ಮ್ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಐವರು ಪ್ರಾಥಮಿಕ ಶಾಲಾ ವಿದ್ಯಾರ್ಥಿನಿಯರನ್ನ ಅರ್ಧ ದಾರಿಯಲ್ಲೇ ಇಳಿಸಿದ ಬಸ್ ನಿರ್ವಾಹಕನ್ನು ತರಾಟೆಗೆ ತೆಗೆದುಕೊಂಡ ಘಟನೆ ಕುಂಪಲದಲ್ಲಿ ನಡೆದಿದೆ. ಮಂಗಳೂರಿನಿಂದ ಕುಂಪಲ ನಡುವೆ ಓಡಾಟ ನಡೆಸುವ ಸರಕಾರಿ ನರ್ಮ್ ಬಸ್ಸಿನ ನಿರ್ವಾಹಕ ಹುಸೇನ್ ಸಾಬ್ ಐ ಹಳ್ಳೂರ ಎಂಬವರು ಎರಡನೇ ಮತ್ತು ಮೂರನೇ ತರಗತಿ ಓದುವ ಐದು ಮಂದಿ ವಿದ್ಯಾರ್ಥಿನಿಯರಲ್ಲಿ ಆಧಾರ್ ಕಾರ್ಡ್ ಇಲ್ಲದಕ್ಕೆ ನಿಮಗೆ

ಉಳ್ಳಾಲ – ಪುತ್ರನ ಆತ್ಮಹತ್ಯೆ ಬೆನ್ನಲ್ಲೇ, ತಂದೆಯೂ ಆತ್ಮಹತ್ಯೆ

ಉಳ್ಳಾಲ : ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂಬವರ ಮೃತದೇಹ ಸೋಮವಾರ ಬೆಳಿಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಪುತ್ರನೂ ಆತ್ಮಹತ್ಯೆ ನಡೆಸಿದ 32 ದಿನಗಳ ಅಂತರದಲ್ಲಿ ತಂದೆಯೂ ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ ಪುತ್ರ ರಾಜೇಶ್ (26) ಕಳೆದ ಜು. 10 ರಂದು ನಾಪತ್ತೆಯಾಗಿದ್ದು, ಬಳಿಕ ರಾಜೇಶ್ ನ ಮೃತದೇಹ 12 ರಂದು ಬೆಳಗ್ಗೆ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ

ಉಳ್ಳಾಲ : ಎಸ್‍ಡಿಪಿಐ ಅಭ್ಯರ್ಥಿಗಳನ್ನು ಬೆಂಬಲಿಸಿದ ಬಿಜೆಪಿ ಸದಸ್ಯರಿಬ್ಬರ ಉಚ್ಛಾಟನೆ

ತಲಪಾಡಿ ಗ್ರಾಮ ಪಂಚಾಯಿತಿನಲ್ಲಿ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಎಸ್‍ಡಿಪಿಐ ಅಭ್ಯರ್ಥಿಗಳನ್ನು ಬೆಂಬಲಿಸಿದ ಇಬ್ಬರು ಬಿಜೆಪಿ ಬೆಂಬಲಿತ ಸದಸ್ಯರನ್ನು ಜಿಲ್ಲಾಧ್ಯಕ್ಷರ ಆದೇಶದಂತೆ ತಕ್ಷಣದಿಂದ ಪಕ್ಷದ ಚಟುವಟಿಕೆಗಳಿಂದ ಉಚ್ಛಾಟಿಸಲಾಗುವುದು ಹಾಗೂ ಮುಂದಿನ ಆರು ವರ್ಷಗಳ ಕಾಲ ಪಕ್ಷಕ್ಕೆ ಬರದಂತೆ ನಿರ್ಭಂಧಿಸಲಾಗುವುದು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಹೇಳಿದ್ದಾರೆ. ಅವರು ಪಂಡಿತ್ ಹೌಸ್‍ನ ಚುನಾವಣಾ

ತಲಪಾಡಿ ಗ್ರಾ.ಪಂ ಬಿಜೆಪಿ ಸದಸ್ಯರ ಬೆಂಬಲ, ಎಸ್‌ಡಿಪಿಐ ಸದಸ್ಯರಿಗೆ ಅಧ್ಯಕ್ಷ ಸ್ಥಾನ

ಉಳ್ಳಾಲ: ತಲಪಾಡಿ ಗ್ರಾ.ಪಂ ಎರಡನೇ ಅವಧಿಗೆ ಎಸ್‌ ಡಿಪಿಐ ಬೆಂಬಲಿತ ಅಧ್ಯಕ್ಷ ಟಿ.ಇಸ್ಮಾಯಿಲ್‌ ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷೆಯಾಗಿ ಬಿಜೆಪಿ ಬೆಂಬಲಿತ ಪುಷ್ಪಾವತಿ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತರು ಎಸ್‌ ಡಿಪಿಐ ಬೆಂಬಲಿತರಿಗೆ ಬೆಂಬಲಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿರೀಕ್ಷಿತ ಅಭ್ಯರ್ಥಿಯಾಗಿದ್ದ ಸತ್ಯರಾಜ್‌ ಪರಾಭವಗೊಂಡಿದ್ದಾರೆ. ಗ್ರಾಮದ ಆಡಳಿತದಲ್ಲಿ ಒಟ್ಟು 24 ವಾರ್ಡುಗಳ ಸದಸ್ಯರ ಪೈಕಿ 13 ಬಿಜೆಪಿ