ಉಳ್ಳಾಲ: ಯು.ಟಿ ಖಾದರ್ ಅವರ ಅಪ್ತ ಸಹಾಯಕರಾಗಿ ಪ್ರಕಾಶ್ ಪಿಂಟೋ ಆಯ್ಕೆ, ಸನ್ಮಾನ
ಕರ್ನಾಟಕ ಸರಕಾರದ ವಿಧಾನ ಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಅವರ ಆಪ್ತ ಸಹಾಯಕರಾಗಿ ಆಯ್ಕೆಯಾದ ಪ್ರಕಾಶ್ ಪಿಂಟೋ ಅವರಿಗೆ ತೊಕ್ಕೊಟ್ಟು ಶಿವಾಜಿ ಪ್ರೆಂಡ್ ಸರ್ಕಲ್ ಮತ್ತು ಸ್ವಾಮಿ ಕೊರಗಜ್ಜ ಸಮಿತಿಯ ವತಿಯಿಂದ ಗೌರವ ಸನ್ಮಾನ ನಡೆಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ಪಿಂಟೋ ಶಿವಾಜಿ ಫ್ರೆಂಡ್ಸ್ ಸರ್ಕಲ್ ಕ್ಲಬ್ ನಲ್ಲಿ ಹಿಂದೂ ಮುಸ್ಲಿಮ್, ಕ್ರೈಸ್ತರು ಸದಸ್ಯರಾಗಿದ್ದಾರೆ, ಸುಮಾರು 50ವರ್ಷದಿಂದ ಮುಂದುವರೆಸುತ್ತಾ ಬಂದಿರುತ್ತಾರೆ, ನಿಮ್ಮ ಮುಂದಿನ ಯೋಜನೆಗಳು ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಯೋಜನೆಗಳಾಗಲಿ ಎಂದು ಹೇಳಿದರು.
ಶಿವಾಜಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಉರ್ಬನ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ನೆಹರೂ ಯುವಕೇಂದ್ರ ಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಮಾತನಾಡಿ ನಮ್ಮ ಇಲಾಖೆಯಲ್ಲಿ ನಡೆಯುವ ಕ್ರೀಡಾ ಕಾರ್ಯಕ್ರಮದಲ್ಲಿ ನಿಮ್ಮ ಸಂಸ್ಥೆಯ ಹೆಚ್ಚಿನ ಸದಸ್ಯರು ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರ ವಾಹನ ಚಾಲಕರ ಸಂಘ ಮಂಗಳೂರು ಅಧ್ಯಕ್ಷ ದಯಾನಂದ್, ಮಾಜಿ ಜಿಲ್ಲಾ ಕ್ರೀಡಾ ನಿರ್ದೇಶಕ ಸಾಜಿದ್ ಉಳ್ಳಾಲ್ ಶುಭಾಶಯದ ಮಾತನ್ನಾಡಿದರು. ಕಾರ್ಯದರ್ಶಿ ರೋಹನ್ ತೊಕ್ಕೋಟ್ಟು, ಗೌರವಾಧ್ಯಕ್ಷರ ಸದಾನಂದ ಒಂಭತ್ತುಕೆರೆ, ಸದಸ್ಯರಾದ ಅಲ್ತಾಫ್, ಹಮೀದ್, ಚಂದ್ರಶೇಖರ್ ಬೋಳಾರ, ಝುಬೇರ್, ಅಜಿತ್ ಕೆರೆಬೈಲ್, ವೇಣುಗೋಪಾಲ್, ಸತೀಶ್ ಕೊಲ್ಯ, ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಆನಂದ್ ಧರ್ಮನಗರ, ಆದರ್ಶ್ ಪೆರ್ಮನ್ನೂರು ಅಧ್ಯಕ್ಷ ವಿನ್ಸೆಂಟ್ ಡಿಸೋಜ ಉಪಸ್ಥಿತರಿದ್ದರು.