ಉಚ್ಚಿಲ ಮೀನುಗಾರರಿಂದ ಸಾಮೂಹಿಕ ಪ್ರಾರ್ಥನೆ : ಲೋಕ ಸಮೃದ್ಧಿಯಾಗಲಿ ಎಂದು ಪೂಜೆ ಸಲ್ಲಿಕೆ

ಉಚ್ಚಿಲ ವಿಶಾಲ್ ಕೈರಂಪಣಿ ಪಂಡಿನಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಸಿ ಬಿರುಸುಗೊಳ್ಳುತ್ತಿರುವ ಮಳೆ ಕಡಿಮೆಯಾಗಲಿ, ಲೋಕ ಸಮೃದ್ಧಿಯಾಗಲಿ, ಮಳೆಗಾಲದ ಮೀನುಗಾರಿಕೆಯಲ್ಲಿ ಮತ್ಸ್ಯ ಸಂಪತ್ತು ಹೇರಳವಾಗಿ ಸಿಗುವಂತ್ತಾಗಲಿ ಎಂದು ಉಚ್ಚಿಲ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶಾಲ್ ಕೈರಂಪಣಿ ಪಂಡಿನ ಎಲ್ಲಾ ಸದಸ್ಯರು ಸಾಮೂಹಿಕ ಪ್ರಾರ್ಥನೆ ನಡೆಸಿದರು.ದೇವಳದ ಅರ್ಚಕ ಗೋವಿಂದ ಭಟ್ ಹಾಗೂ ಸಾಮಗರು ಪ್ರಾರ್ಥನಾ ವಿಧಿ ವಿಧಾನ ನೆರವೇರಿಸಿದರು. ಈ ಸಂದರ್ಭ ವಿಶಾಲ್ ಫಂಡಿನ ತಂಡೇಲರಾದ ಐತಪ್ಪ ಕೆ ಸುವರ್ಣ, ಸೇಣವ ವಿಠಲ ಕೆ ಸುವರ್ಣ ಹಾಗೂ ಫಂಡಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.