ಅವ್ಯವಸ್ಥೆಯಿಂದ ಕೂಡಿದೆ ಮಂಗಳೂರಿನ ಬಿಜೈ ಮಾರುಕಟ್ಟೆ

ಅವ್ಯವಸ್ಥೆಯಿಂದ ಕೂಡಿದೆ ಮಂಗಳೂರಿನ ಬಿಜೈ ಮಾರುಕಟ್ಟೆ
ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕೆಳಅಂತಸ್ತಿನಲ್ಲಿ ಮಳೆ ನೀರು
ಮಳೆ ನೀರು ನಿಂತು, ಸೊಳ್ಳೆ ಉತ್ಪಾದನಾ ಕೇಂದ್ರವಾಗಿದೆ ಮಾರುಕಟ್ಟೆ

ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡ ಮಂಗಳೂರಿನ ಬಿಜೈ ಮಾರುಕಟ್ಟೆ ಸಂಕೀರ್ಣವು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮಳೆ ನೀರು ನಿಂತು ಮಲೇರಿಯಾ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ. ಇದೀಗ ಕೆಳ ಅಂತಸ್ತಿನಲ್ಲಿ ಮಳೆ ನೀರಿನಿಂದಾಗಿ, ಸಿಮ್ಮಿಂಗ್ ಫುಲ್ ಆಗಿ ಕಾಣತೊಡಗಿದೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ…

ಸಿಮ್ಮಿಂಗ್ ಫುಲ್ ಆಗಿ ಕಂಗೊಳಿಸುತ್ತಿದೆ ಬಿಜೈ ಮಾರುಕಟ್ಟೆ
ಬಿಜೈ ಮಾರುಕಟ್ಟೆಯ ಕೆಲ ಅಂತಸ್ತಿನಲ್ಲಿ ಮಳೆ ನೀರು ಶೇಖರಣೆ
ಸೊಳ್ಳೆ ಉತ್ಪಾದನಾ ಕೇಂದ್ರವಾಗುತ್ತಿದೆ ಬಿಜೈ ಮಾರುಕಟ್ಟೆ…!

ಇದು ಮಂಗಳೂರಿನ ಬಿಜೈ ಮಾರ್ಕೇಟ್… ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡ ಸಂಕೀರ್ಣ ಇದೀಗ ಅವ್ಯವಸ್ಥೆಯ ತಾಣವಾಗಿದೆ. ಕಳೆದ ಹಲವಾರು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದಾಗಿ, ಮಾರುಕಟ್ಟೆಯ ತಳ ಅಂತಸ್ತಿನಲ್ಲಿ ನೀರು ಶೇಖರಣೆಯಾಗುತ್ತಿದ್ದು ಗ್ರಾಹಕರು, ವ್ಯಾಪಾರಸ್ಥರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಐದು ಕೋಟಿ ವೆಚ್ಚದಲ್ಲಿ 2017ರಲ್ಲಿ ಮೂರು ಅಂತಸ್ತಿನ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲಾಗಿತ್ತು. ಆದರೆ ಅಲ್ಲಿನ ಅಸಮರ್ಪಕ ಕಾಮಗಾರಿಯಿಂದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು.

ಕೋಟ್ಯಾಂತರ ವೆಚ್ಚದಲ್ಲಿ ನಿರ್ಮಾಣಗೊಂಡ ಮಂಗಳೂರಿನ ಬಿಜೈ ಮಾರುಕಟ್ಟೆ ಸಂಕೀರ್ಣವು ಇದೀಗ ಸಮಸ್ಯೆಗಳ ಅಗರವಾಗಿದೆ. ಮಳೆ ನೀರು ಸರಿಯಾಗಿ ಹರಿದು ಹೋಗುತ್ತಿಲ್ಲ, ಕೆಳಅಂತಸ್ತಿನಲ್ಲಿ ಮಳೆ ಶೇಖರಣೆ ಆಗುತ್ತಿರುವುದಕ್ಕೆ ಪಂಪ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಆದರೆ ಇದೀಗ ಅದು ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.
ಕೆಲವರು ವ್ಯಾಪಾರ ಆರಂಭಿಸಿದರೂ, ನಷ್ಟದಿಂದ ಮುಚ್ಚಿ ಹೋಗುತ್ತಿದ್ದಾರೆ. ಒಂದೆಡೆ ತಳ ಅಂತಸ್ತು ಸೇರಿ ಅಲ್ಲಲ್ಲಿ ನೀರು ನಿಲ್ಲುವುದು, ಮತ್ತೊಂದೆಡೆ ಕ್ಲೀನ್ ಇಲ್ಲದಿರುವುದು ಗ್ರಾಹಕರು, ವ್ಯಾಪಾರಸ್ಥರ ಅಸಮ್ಮತಿಗೆ ಕಾರಣವಾಗಿದೆ. ಈಗಂತೂ ವಾರ ಕಾಲದಿಂದ ತಳ ಅಂತಸ್ತಿನಲ್ಲಿ ನೀರು ನಿಂತಿದ್ದು ಹೊರಗೆ ಹರಿದು ಹೋಗಲು ಸೌಲಭ್ಯ ಇಲ್ಲದೆ ಮಲೇರಿಯಾ ಜ್ವರ ಹರಡುವ ಸೊಳ್ಳೆಗಳ ಉತ್ಪತ್ತಿಗೆ ದಾರಿ ಮಾಡಿಕೊಟ್ಟಿದೆ ಎಂದು ಮಾಜಿ ಕಾರ್ಪೋರೇಟರ್ ಪ್ರಕಾಶ್ ಸಾಲ್ಯಾನ್ ಆರೋಪಿಸಿದ್ದಾರೆ

ಮಂಗಳೂರು ನಗರ ಪಾಲಿಕೆ ಸ್ಮಾರ್ಟ್ ಹೆಸರಿನಲ್ಲಿ ಅಭಿವೃದ್ಧಿ ಆಗುತ್ತಿದೆ. ಅದರೆ ನಗರದ ಹೃದಯಭಾಗದಲ್ಲಿರುವ ಬಿಜೈ ಮಾರ್ಕೇಟ್ ಅನ್ನು ಪಾಲಿಕೆ ಅಧಿಕಾರಿಗಳು ಮಾತ್ರ ಇತ್ತ ಗಮನ ಹರಿಸದೇ ಇರುವುದು ವಿಪರ್ಯಾಸವೇ ಸರಿ, ಮಳೆ ನೀರು ನಿಂತು ಮಲೇರಿಯಾ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ಮಾರ್ಪಟ್ಟಿದೆ

ಕಳೆದ 1 ವಾರಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಿಜೈ ಮಾರ್ಕೇಟ್‍ನ ಕೆಳ ಅಂತಸ್ತಿನಲ್ಲಿ ಸಿಮ್ಮಿಂಗ್ ಫುಲ್ ಆಗಿ ಮಾರ್ಪಟ್ಟಿದೆ. ಮಳೆ ನೀರು ಪಂಪ್ ಮಾಡದೇ ಇರುವುದರಿಂದ ಮಳೆ ನೀರು ಶೇಖರಣೆ ಆಗುವ ಸೊಳ್ಳೆ ಉತ್ಪಾದನ ಮಾಡಲು ಮಂಗಳೂರು ಮಹಾನಗರ ಪಾಲಿಕೆಗೆ ವ್ಯವಸ್ಥೆ ಮಾಡಿದ್ದಂತಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ, ಇದಕ್ಕೆ ಸೂಕ್ತ ವ್ಯವಸ್ಥೆ ಮಾಡುವ ಜೊತೆಗೆ ಬಿಜೈ ಮಾರುಕಟ್ಟೆ ಸಂಕೀರ್ಣವನ್ನು ಉಳಿಸುವ ಕೆಲಸ ಮಾಡಬೇಕಾಗಿದೆ.

Related Posts

Leave a Reply

Your email address will not be published.