HomeFresh Newsಉಡುಪಿ: ಎರಡು ಬೈಕುಗಳ ನಡುವೆ ಅಪಘಾತ - ಓರ್ವ ಬೈಕ್ ಸವಾರ ಸಾವು

ಉಡುಪಿ: ಎರಡು ಬೈಕುಗಳ ನಡುವೆ ಅಪಘಾತ – ಓರ್ವ ಬೈಕ್ ಸವಾರ ಸಾವು

ಉಡುಪಿ: ಎರಡು ಬೈಕುಗಳ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಬೈಕ್ ಸವಾರ ಮೃತಪಟ್ಟ ಘಟನೆ ಅಜ್ಜರಕಾಡಿ ಅಗ್ನಿ ಶಾಮಕ ದಳ ಠಾಣೆಯ ಸಮೀಪ ಸೋಮವಾರ ರಾತ್ರಿ ಸಂಭವಿಸಿದೆ.


ಮೃತರನ್ನು ಸ್ಥಳೀಯರಾದ ಸ್ಯಾಮುಯೆಲ್ ಸದಾನಂದ ಕರ್ಕಡ(59) ಎಂದು ಗುರುತಿಸಲಾಗಿದೆ. ಅತಿ ವೇಗದಿಂದ ಬಂದ ಎರಡು ಬೈಕ್ ಗಳು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಸದಾನಂದ ರಸ್ತೆಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡು ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.
ಅಪಘಾತದಿಂದ ಎರಡು ಬೈಕ್ ಗಳು ಕೂಡ ಸಂಪೂರ್ಣ ನಜ್ಜುಗುಜ್ಜಾಗಿವೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

add - BDG
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments