ಉಡುಪಿ: ಹೆದ್ದಾರಿ ಮಧ್ಯದಲ್ಲೇ ತ್ಯಾಜ್ಯ ಮೂಟೆ – ಸೂಕ್ತ ಕ್ರಮ ಕೈಗೊಳ್ಳುವಂತೆ ಮಣೂರು ಜನರ ಆಗ್ರಹ

ಉಡುಪಿ:-ಮಣೂರು ರಾಷ್ಟ್ರೀಯ ಹೆದ್ದಾರಿ 66ರ ಮಧ್ಯದಲ್ಲಿ ಕಿಡಿಗೇಡಿಗಳು ಮೂಟೆ ಗಟ್ಟಲೆ ತ್ಯಾಜ್ಯ ಎಸೆದು ಹೋಗುತ್ತಿರುವ ಘಟನೆ ಕಳೆದ ಎರಡು ದಿನಗಳಿಂದ ಸತತವಾಗಿ ನಡೆಯುತ್ತಿದೆ.

ಸೋಮವಾರ ರಾತ್ರಿ ಬೆಳಗಾಗುವದರೊಳಗೆ ಒಂದು ಬಾರಿ ಗಾತ್ರದ ತ್ಯಾಜ್ಯದ ಚೀಲ ಕಾಣಿಸಿಕೊಂಡಿತ್ತು. ನಂತರ ಮಂಗಳವಾರ ಮುಂಜಾನೆಯೊಳಗೆ ಮತ್ತೆ ಮೂರು ಬಾರಿ ಗಾತ್ರದ ತ್ಯಾಜ್ಯದ ಚೀಲ ಅದೇ ಡಿವೈಡರ್ ಮಧ್ಯದಲ್ಲಿ ಕಿಡಿ ಗೇಡಿಗಳು ಎಸೆದು ಹೋಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನೆಗೆ ಸಂಬಂಧಿಸಿ ಕೋಟದ ಪಂಚವರ್ಣ ಸಂಘಟನೆ ಅಧ್ಯಕ್ಷ ಮನೋಹರ್ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ರಾಷ್ಟ್ರೀಯ ಹೆದ್ದಾರಿ ನಿರ್ವಹಿಸುತ್ತಿರುವ ಕೆ.ಕೆ ಆರ್ ಕಂಪನಿ ಹಾಗೂ ಕೋಟ ಗ್ರಾ.ಪಂ.ಮಾಹಿತಿ ನೀಡಿದ್ದು, ಕ್ರಮಕೈಗೊಳ್ಳುವ ನಿರೀಕ್ಷೆಯಿದೆ.
