HomeFresh Newsಉಡುಪಿ: ರುಪಿ ಬಾಸ್ MSME ಮಿಲನ್ ಕಾರ್ಯಕ್ರಮ

ಉಡುಪಿ: ರುಪಿ ಬಾಸ್ MSME ಮಿಲನ್ ಕಾರ್ಯಕ್ರಮ

ಸೇಲ್‌ಎಕ್ಸ್‌ಪರ್ಟ್ ಬ್ಯುಸಿನೆಲ್ ಸೊಲ್ಯೂಷನ್ಸ್ ವತಿಯಿಂದ ರುಪಿ ಬಾಸ್ ಎಮ್‌ಎಸ್‌ಎಮ್‌ಇ ಮಿಲನ್ ಮತ್ತು ಎನ್‌ಎಸ್‌ಇ ಎಮರ್ಜ್ ಹಾಗೂ ರೋಟರಿ ಉಡುಪಿ ಮಿಡ್ ಟೌನ್ ಸಹಯೋಗದೊಂದಿಗೆ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬ್ಯುಸ್‌ನೆಸ್‌ಮೆನ್ ಹಾಗೂ ರುಪಿ ಬಾಸ್ ಎಮ್‌ಎಸ್‌ಎಮ್‌ಇ ಮಿಲನ್ ಸಹಯೋಗದೊಂದಿಗೆ ಈ ಕಾರ್ಯಾಗಾರವು ಸೇಲ್ ಎಕ್ಸ ಪರ್ಟ್ ಬ್ಯುಸಿನೆಸ್‌ನ ಸಂಸ್ಥಾಪಕ ಪ್ರವೀಣ್ ಚಂದ್ರ ಮುಂದಾಳತ್ವದಲ್ಲಿ ಆಯೋಜಿಸಲಾಗಿತ್ತು.

Udupi MSME Milan program

ಈ ಕಾರ್ಯಾಗಾರದಲ್ಲಿ ಅಮೂಲ್ಯವಾದ ಜ್ಞಾನ, ಉದ್ಯಮ, ಮಾರ್ಕೆಟಿಂಗ್, ಬ್ರ್ಯಾಂಡಿಂಗ್ ಮತ್ತು ಸಂಹವನ ತಜ್ಞರಾದ ಇಯಾನ್ ಫರಿಯಾ,ಪ್ರೋ ಸತ್ಯನಾರಾಯಣ, ಕೃಷ್ಣ ಮರಿಯಾಂಕ,ಐವರ್ ಮಿಸ್ಕಿತ್,ಪಿ.ಎನ್ ಶೆಟ್ಟಿ ಹಾಗೂ ಸೆಂಥಿಲ್ ಮುರುಗನ್  ಪಾಲ್ಗೊಂಡು ಹಲವಾರು ವಿಚಾರಗಳನ್ನು ಹಂಚಿಕೊಂಡರು.

ಈ ಕಾರ್ಯಕ್ರಮದಲ್ಲಿ ಮಂಗಳೂರಿನ ಕಾನ್ಫಿಡ್ರೇಷನ್ ಇಂಡಿಯಾ ಇಂಡಸ್ಟ್ರಿಯ ವಯ್ಸ್ ಚೇರ್‌ಮೆನ್ ಅಜಿತ್ ಕಾಮತ್, ಉಡುಪಿ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಯ ಅಧ್ಯಕ್ಷರಾದ ಪ್ರಭಾಕರ್ ನಾಯಕ್, ಉಡುಪಿ ಜಿಲ್ಲಾ ಸ್ಮಾಲ್ ಇಂಡಸ್ಟ್ರಿ ಅಸೋಸಿಯೇಶನ್‌ನ ಸೆಕ್ರೆಟ್ರಿ ಕೃಷ್ಣಪ್ರಸಾದ್, ರೋಟರಿ ಜಿಲ್ಲಾ ೩೧೮೨ಡಿಜಿಇ ಸಿಎ ದೇವ್ ಆನಂದ್, ಡ್ಯೂರೋಟಾಪ್ ಕನ್ಸ್ಟ್ರಕ್ಷನ್ ಕೆಮಿಕಲ್ಸ್ ಪ್ರೈವೆಟ್ ಲಿಮಿಟೆಡ್‌ನ ಎಂ.ಡಿ. ಅಲ್ವಿನ್ ಕ್ವಾಡ್ರಸ್, ರೋಟರಿ ಕ್ಲಬ್ ಉಡುಪಿ ಮಿಡ್‌ಟೌನ್‌ನ ಅಧ್ಯಕ್ಷರಾದ ಭುಜಂಗ ಶೆಟ್ಟಿ, ತಾರ್ಜಾನಿ ಇನ್ಸೂರೆನ್ಸ್‌ನ ಬ್ರಾಕಿಂಗ್ ಪ್ರೈವೆಟ್ ಲಿಮಿಟೆಡ್‌ಮ ಚೇರ್‌ಮೆನ್, ಪ್ರಿನ್ಸಿಪಲ್ ಅಫೀಸರ್ ಪ್ರಭಾಕರ್ ಶೆಟ್ಟಿ, ಸೇಲ್ಸ್ ಎಕ್ಸಪರ್ಟ್ ಬ್ಯುಸಿನೆಸ್ ಸೊಲ್ಯೂಶನ್‌ನ ಸ್ಥಾಪಕರಾದ ಪ್ರವೀಣ್ ಚಂದ್ರ, ಸೇಲ್ಸ್ ಎಕ್ಸ್‌ಪರ್ಟ್ ಬ್ಯುಸ್‌ನೆಸ್ ಸೊಲ್ಯೂಷನ್‌ನ ಸಲಹಾಗಾರರು ಮತ್ತು ವಕೀಲರಾದ ಪಿ.ಎನ್. ಪ್ರಸನ್ನ ಕುಮಾರ್ ರಾವ್ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments