ಉಡುಪಿ: ಪಿಎಸ್ಐ ಹೃದಯಾಘಾತದಿಂದ ಸಾವು
ಉಡುಪಿ ಜಿಲ್ಲಾ ನಿಯಂತ್ರಣ ಕೊಠಡಿಯ ಪೊಲೀಸ್ ಉಪನಿರೀಕ್ಷಕ ನಿತ್ಯಾನಂದ(51) ಶಿರ್ವ ಗ್ರಾಮದ ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.
ಕಳೆದ 3 ವರ್ಷಗಳಿಂದ ಜಿಲ್ಲಾ ನಿಯಂತ್ರಣ ಕೊಠಡಿಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇವರು, ಸೆ.16ರಂದು ಬೆಳಗ್ಗೆ ಪಾಳಿ ಕರ್ತವ್ಯ ಮುಗಿಸಿ ವಿಶ್ರಾಂತಿಗೆ ತೆರಳಿದ್ದರು. ರಾತ್ರಿ ಮನೆಯಲ್ಲಿ ಊಟದ ನಂತರ ಮಲಗಿದ್ದ ಇವರು, ಬೆಳಗ್ಗೆ ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದರು.ಮೃತರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.