HomeFresh Newsಪ್ರಾಮಾಣಿಕತೆ ಮೆರೆದ ಸಿಟಿ ಬಸ್ ಸಿಬ್ಬಂದಿ : ಕಳೆದುಹೋದ 18 ಗ್ರಾಂ ಚಿನ್ನದ ಬಳೆ ಮಹಿಳೆಗೆ...

ಪ್ರಾಮಾಣಿಕತೆ ಮೆರೆದ ಸಿಟಿ ಬಸ್ ಸಿಬ್ಬಂದಿ : ಕಳೆದುಹೋದ 18 ಗ್ರಾಂ ಚಿನ್ನದ ಬಳೆ ಮಹಿಳೆಗೆ ವಾಪಸ್

ಉಳ್ಳಾಲ: ಬಸ್ ನಲ್ಲಿ ಕಳೆದುಹೋದ 18 ಗ್ರಾಂ ಚಿನ್ನದ ಬಳೆಯನ್ನು ಬಸ್ ನಿರ್ವಾಹಕ ಹಾಗೂ ಚಾಲಕ ಮಾಲೀಕರ ಸಹಕಾರದೊಂದಿಗೆ ಪೆÇಲೀಸರಿಗೆ ವಾಪಸ್ಸು ಮಾಡಿ ಪ್ರಾಮಾಣಿಕತೆ ಮೆರೆದÀ ಘಟನೆ ಉಳ್ಳಾಲ ಪೆÇಲೀಸ್ ಠಾಣೆಯಲ್ಲಿ ನಡೆದಿದೆ. ಜ.1 ರಂದು ಮಂಗಳೂರಿನಿಂದ ಉಳ್ಳಾಲ ಕಡೆಗೆ ಶಾಲಿಮಾರ್ 44ಸಿ ಬಸ್ಸಿನಲ್ಲಿ ಬಿಸಿರೋಡ್ ಮೂಲದ ಮಹಿಳೆ ತಸ್ಲಿಮಾ ಪ್ರಯಾಣಿಸುತ್ತಿರುವಾಗ 18 ಗ್ರಾಂ ತೂಕದ ಚಿನ್ನದ ಬಳೆಯನ್ನು ಕಳೆದುಕೊಂಡಿದ್ದರು.ಉಳ್ಳಾಲದ ತಾಜ್ ಮಹಲ್ ಸಭಾಂಗಣದಲ್ಲಿ ಮದುವೆ ಸಮಾರಂಭಕ್ಕೆ ತೆರಳುವಾಗ ಘಟನೆ ನಡೆದಿತ್ತು. ಬಸ್ ನಲ್ಲಿ ಸಿಕ್ಕ ಬಂಗಾರದ ಬಳೆಯನ್ನು ಬಸ್ ಚಾಲಕ ನಿಸಾರ್ ಅಹಮ್ಮದ್ ಹಾಗೂ ನಿರ್ವಾಹಕ ಇಬ್ರಾಹಿಂ ಮಂಜನಾಡಿ ಇಬ್ಬರು ಬಸ್ ಮಾಲೀಕ ಅಬ್ದುಲ್ ರಝಾಕ್ ಎಂಬವರ ಗಮನಕ್ಕೆ ತಂದಿದ್ದರು. ಅವರು ಜ.2 ರಂದು ಉಳ್ಳಾಲ ಪೆÇಲೀಸ್ ಠಾಣೆಗೆ ಆಗಮಿಸಿ ಚಿನ್ನವನ್ನು ನೀಡಿ ಪ್ರಾಮಾಣಿಕತೆ ಮೆರೆದರು. ಇದೇ ಸಂದರ್ಭ ಚಿನ್ನ ಕಳೆದುಕೊಂಡ ಮಹಿಳೆ ತಸ್ಲೀಮಾ ಅವರು ಠಾಣೆಗೆ ಆಗಮಿಸಿದ್ದು, ಅವರಿಗೆ ಎಸ್. ಐ ಶಿವು ಕುಮಾರ್ ಸಮ್ಮುಖದಲ್ಲಿ ಕಳೆದುಹೋದ ಚಿನ್ನವನ್ನು ವಾಪಸ್ಸು ನೀಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments