ನವಮಿ ಡಾಟ್ ಕಾಮ್‍ನಿಂದ ವೈದ್ಯಕೀಯ ನೆರವಿಗಾಗಿ ಕ್ರಿಕೆಟ್ ಪಂದ್ಯಾಟ

ಆರೋಗ್ಯ ಪೀಡಿತರಿಗೆ ಅರವಾಗುವುದು, ಪ್ರತಿ ಮಗುವಿಗೂ ಶಿಕ್ಷಣ ಒದಗಿಸುವ ಒತ್ತಾಸೆ ಹಾಗೂ ಕ್ರೀಡೆಯ ಮೂಲಕ ಸದೃಢ ಸಮಾಜದ ನಿರ್ಮಾಣದ ಗುರಿಯೊಂದಿಗೆ ಕೊಡೇರಿಯ ನವಮಿ ಡಾಟ್ ಕಾಮ್ ನಿಂದ 4ನೇ ಬಾರಿಗೆ ಕೊಡೇರಿಯ ವೈಸಿಸಿ ಕ್ರೀಡಾಂಗಣದಲ್ಲಿ ಐಪಿಎಲ್ಪಿ ಮಾದರಿಯ ಕೊಡೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ ಹೊಸವರ್ಷದ ಮೊದಲ ದಿನ ನಡೆಯಿತು.ಕ್ಲಾಸಿಕ್ ಕ್ರಿಕೆಟರ್ಸ್ ವಿನ್ನರ್ ಹಾಗೂ ಎಂಡ್ ಪಾಯಿಂಟ್ ಕ್ರಿಕೆಟರ್ಸ್ ರನ್ನರ್ಸ್ ಆಗಿ ಹೊರ ಹೊಮ್ಮಿದರು. ಬೈಂದೂರು ತಾಲೂಕು ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿಯವರು ವಿಜೇತರಿಗೆ ಟ್ರೋಪಿ ವಿತರಿಸಿದರು. ಮಾಜಿ ಶಾಸಕ ಕೆ. ಗೋಪಾಲ್ ಪೂಜಾರಿಯವರು ಆಗಮಿಸಿ, ಪಂದ್ಯಾಟಕ್ಕೆ ಶುಭ ಹಾರೈಸಿದ್ದರು. ಮೀನುಗಾರಿಕೆ ಇಲಾಖೆಯ ನಿವೃತ್ತ ಅಧಿಕಾರ ಸಿ.ಎಸ್.ಖಾರ್ವಿ ದೀಪ ಬೆಳಗಿಸುವ ಮೂಲಕ ಪಂದ್ಯಾಟಕ ಚಾಲನೆ ನೀಡಿದರು.
ಇದೇ ವೇಳೆ ಆಟಗಾರರಿಗೆ ದಾನಿಗಳಾದ ಉದ್ಯಮಿ ವಿಜಯ್ ಶೆಟ್ಟಿಯವರು ಕೊಡಮಾಡಿದ ಜರ್ಸಿ (ಟಿ -ಶರ್ಟ್) ವಿತರಿಸಲಾಯಿತು. ದಾನಿಗಳಾದ ಲಯನ್ಸ್ ಅಧ್ಯಕ್ಷ ರವಿರಾಜ್ ಹೆಗ್ಡೆ ಚೇರ್ಕಾಡಿ ಕೊಡಮಾಡಿದ ಕ್ಯಾಪ್ ಗಳನ್ನು ಆಟಗಾರರಿಗೆ ಹಸ್ತಾಂತರಿಸಲಾಯಿತು. ಕಿರಿಮಂಜೇಶ್ವರ ಗ್ರಾಮಪಂಚಾಯತಿ ಉಪಾಧ್ಯಕ್ಷ ಶೇಖರ್ ಖಾರ್ವಿ, ಸದಸ್ಯರಾದ ಆನಂದ ಪೂಜಾರಿ, ರಾಜು ದೇವಾಡಿಗ ಶುಭಾ ಹಾರೈಸಿ, ನವಮಿ ಡಾಟ್ ಕಾಮ್ ಸೇವೆಯನ್ನ ಶ್ಲಾಘಿಸಿದರು. ನವಮಿ ಡಾಟ್ ಕಾಮ್ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾರ್ ಅಧ್ಯಕ್ಷತೆ ವಹಿಸಿ, ಪ್ರಸ್ತಾವನೆಗೈದರು. ಸ್ಥಳೀಯರು ಹಾಗೂ ಉದ್ಯಮಿಗಳಾದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಾಬು ಶೆಟ್ಟಿ, ಮಂಜುನಾಥ ದೇವಾಡಿಗ, ಫಾರೂಕ್ ಸಾಹೇಬ್ ನಾಗೂರು, ದಿನೇಶ್ ಪೂಜಾರಿ, ರಮೇಶ್ ಖಾರ್ವಿ, ಅನುರ್ ಮೆಂಡನ್, ನಾರಾಯಣ ಖಾರ್ವಿ ಮೊದಲಾದವರು ಉಪಸ್ಥಿತರಿದ್ದು ಆಟಗಾರರಿಗೆ ಶುಭಾಶಯ ಕೋರಿದರು.ಕೊಡೇರಿಯ ಲಯನ್ಸ್ ಕ್ರಿಕೆಟರ್ಸ್, ಪವರ್ ಸ್ಟಾರ್ ಕ್ರಿಕೆಟರ್ಸ್, ಎಂಡ್ ಪಾಯಿಂಟ್ ಕ್ರಿಕೆಟರ್ಸ್, ವೈಷ್ಞವಿ ಕ್ರಿಕೆಟರ್ಸ್, ಕ್ಲಾಸಿಕ್ ಕ್ರಿಕೆಟರ್ಸ್ ಹಾಗೂ ಹಕ್ರೆಮಠ ಕ್ರಿಕೆಟರ್ಸ್ ನ ಮಾಲಕರು, ಆಟಗಾರರು ಸ್ಥಳೀಯರು ಉಪಸ್ಥಿತರಿದ್ದರು.
