ನಿವೃತ್ತ ಮುಖ್ಯೋಪಾಧ್ಯಾಯ ಜಗನ್ನಾಥ .ಕೆ ನಿಧನ

ಮಂಗಳೂರು : ಉಳ್ಳಾಲ ತಾಲೂಕಿನ ಸೋಮೇಶ್ವರ ಆನಂದಾಶ್ರಮ ಪ್ರೌಢ ಶಾಲೆಯ ನಿವತ್ತ ಮುಖ್ಯೋಪಾಧ್ಯಾಯ ಜಗನ್ನಾಥ .ಕೆ (77)ಅವರು ಹೃದಯಾಘಾತದಿಂದ ಮಂಗಳವಾರ ನಿಧನರಾದರು . ಅವರು ಉಳ್ಳಾಲ ಕಾಪಿಕಾಡ್ ನಿವಾಸಿಯಾಗಿದ್ದರು . ತನ್ನ ನಿವೃತ್ತಿಯ ಬಳಿಕ ಅವರು ಆನಂದಾಶ್ರಮ ಶಾಲೆಯ ಮಾತೃಸಂಸ್ಥೆಯಾಗಿರುವ ಸಾರಸ್ವತ ಶಿಕ್ಷಣ ಸಂಸ್ಥೆಯ ಆಡಳಿತಕ್ಕೊಳಪಟ್ಟ ಉತ್ತರ ಕನ್ನಡದ ಶಿರಾಲಿಯ ಶ್ರೀವಳ್ಳಿ ಪ್ರೌಢಶಾಲೆಯ ಪ್ರಥಮ ಮುಖ್ಯೋಪಾಧ್ಯಾಯರಾಗಿ 2004 ರಿಂದ 2007 ರ ತನಕ ಕಾರ್ಯ ನಿರ್ವಹಿಸಿದ್ದರು. ಬಳಿಕ ಒಂದೂವರೆ ವರ್ಷ ಉಚ್ಚಿಲ ಭಗವತಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರು . ಸರಳ ಸಜ್ಜನಿಕೆಯ ಶಿಕ್ಷಕರಾಗಿ ಅಪಾರ ಜನ ಮನ್ನಣೆ ಗಳಿಸಿದ್ದರು .ಅವರು ಪತ್ನಿ , ಒಬ್ಬ ಪುತ್ರ, ಒಬ್ಬಳು ಪುತ್ರಿ ಹಾಗೂ ಸಹೋದರರು , ಸಹೋದರಿಯರನ್ನು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Related Posts

Leave a Reply

Your email address will not be published.