ಮುಕ್ಕ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನ- ಜ.14 ರಂದು ಸಾಮೂಹಿಕ ಶ್ರೀ ಶನಿಶಾಂತಿ ಹೋಮ ಶ್ರೀ ಶನೇಶ್ವರ ಪೂಜೆ

ಮಂಗಳೂರಿನ ಮುಕ್ಕದಲ್ಲಿರುವ ಶ್ರೀ ಸತ್ಯಧರ್ಮ ದೇವಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ಶನಿಶಾಂತಿ ಹೋಮ ಶ್ರೀ ಶನೇಶ್ವರ ಪೂಜೆ ಜ.೧೪ರಂದು ಹಮ್ಮಿಕೊಂಡಿದ್ದಾರೆ. ಶ್ರೀ ಕ್ಷೇತ್ರದಲ್ಲಿ ಬೆಳಿಗ್ಗೆ ೮ರಿಂದ ಸಾಮೂಹಿಕ ಶನಿಶಾಂತಿ ಹೋಮ ಪ್ರಾರಂಭಗೊಳ್ಳಲಿದೆ. ೧೧ ಗಂಟೆಗೆ ಪೂರ್ಣಾಹುತಿ , 11.30ಕ್ಕೆಸಭಾ ಕಾರ್ಯಕ್ರಮ ಜರುಗಲಿದೆ.12.30ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಲಿದೆ.

ಇನ್ನು ಇದೇ ವೇಳೆ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವದ ವಿಜ್ಞಾಪನಾ ಪತ್ರ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಇನ್ನು ಅನ್ನಸಂತಪರ್ಣೆಗೆ ನೀಡುವ ಅಕ್ಕಿ, ಬೆಲ್ಲ ತೆಂಗಿನಕಾಯಿ ಮುಂತಾದ ಹಸಿರುವಾಣಿ ಮತ್ತು ಧನಸಹಾಯವನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು. ಶನಿದೇವರಿಗೆ ಎಳ್ಳು ಮತ್ತು ಎಳ್ಳೆಣ್ಣೆಯನ್ನು ಸಮರ್ಪಿಸಬಹುದು

Related Posts

Leave a Reply

Your email address will not be published.