HomeFresh Newsಮಲತಂದೆಯಿಂದ ಅಪ್ರಾಪ್ತೆ ಅತ್ಯಾಚಾರ

ಮಲತಂದೆಯಿಂದ ಅಪ್ರಾಪ್ತೆ ಅತ್ಯಾಚಾರ

ಉಳ್ಳಾಲ: ಮಲತಂದೆಯೋರ್ವ 9 ರ ಹರೆಯದ ಮಗಳ ಮೇಲೆಯೇ ಅತ್ಯಾಚಾರವೆಸಗಿರುವ ಘಟನೆ ಕೊಣಾಜೆ‌ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ಎಂಬಲ್ಲಿ ಇಂದು ಬೆಳಕಿಗೆ ಬಂದಿದೆ.

ಪ್ರಕರಣ ಸಂಬಂಧ ಆರೋಪಿ ಅಶ್ವಥ್ (25) ಎಂಬಾತನನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೊರಜಿಲ್ಲೆಯಿಂದ ಬಂದ ಕುಟುಂಬ ಪಾವೂರಿನಲ್ಲಿ ನೆಲೆಸತ್ತು. ಮಹಿಳೆಯ ಪತಿ ಸಾವನ್ನಪ್ಪಿದ ಬಳಿಕ ಅಶ್ವಥ್ ಜತಗೆ ಸಂತ್ರಸ್ತ ಬಾಲಕಿಯ ತಾಯಿ ಸಂಸಾರ ನಡೆಸುತ್ತಿದ್ದರು. ಆಕೆ ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಅಶ್ವಥ್ ಹಾಗೂ ಬಾಲಕಿ ಮನೆಯಲ್ಲಿದ್ದರು. ಈ ವೇಳೆ ಬಾಲಕಿ ಮೇಲೆ ಆರೋಪಿ ಅತ್ಯಾಚಾರವೆಸಗಿದ್ದು, ವಿಪರೀತ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಕೊಣಾಜೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಾಂಡೇಶ್ವರದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments