ಉಳ್ಳಾಲ : ಸಂಚಾರಿ ಎಎಸ್‍ಐನಿಂದ ಸಿಟಿಬಸ್ ನಿರ್ವಾಹಕನಿಗೆ ಹಲ್ಲೆ

ಉಳ್ಳಾಲ: ಸಂಚಾರಿ ಠಾಣಾ ಎಎಸ್ ಐ ಸಿಟಿ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿರುವ ಘಟನೆ ತಲಪಾಡಿಯಲ್ಲಿ ನಡೆದಿದ್ದು, ಕೃತ್ಯ ಖಂಡಿಸಿ ಬಸ್ ಸಿಬ್ಬಂದಿ ತಲಪಾಡಿ- ಸ್ಟೇಟ್ ಬ್ಯಾಂಕ್ ಚಲಿಸುವ ಬಸ್ ಬಂದ್ ನಡೆಸಿ ಪ್ರತಿಭಟನೆ ನಡೆಸಿದ್ರು.ಉಷಾ ಹೆಸರಿನ ಸಿಟಿ ಬಸ್ ನಿರ್ವಾಹಕ ರಾಜು ಎಂಬಾತನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜೆಪ್ಪು ಸಂಚಾರಿ ಠಾಣೆಯ ಎಎಸ್ ಐ ಆಲ್ಬರ್ಟ್ ಲಸ್ರಾದೊ ಇಂದು ಬೆಳಿಗ್ಗೆ ತಲಪಾಡಿ ಬಳಿ ಸಿಟಿ ಬಸ್ಸುಗಳ ವಿರುದ್ಧ ಕೇಸುಗಳನ್ನು ಹಾಕುತ್ತಿದ್ದರು. ಈ ನಡುವೆ ನಿರ್ವಾಹಕನೋರ್ವನಿಗೆ ಹಲ್ಲೆ ನಡೆಸಿದ್ದಾರೆ. ಕೃತ್ಯ ಖಂಡಿಸಿದ ಬಸ್ ಸಿಬ್ಬಂದಿ ಬೆಳಗ್ಗಿನಿಂದ ಮಧ್ಯಾಹ್ನವರೆಗೂ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

Related Posts

Leave a Reply

Your email address will not be published.